ವಿಟ್ಲ: ನಾಳೆ ಆಂಡ್ ನೇರ್ಚೆ ಮತ್ತು ಮದನಿಯಂ ಮಜ್ಲಿಸ್
ವಿಟ್ಲ: ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಸಂಸ್ಥೆಯ ಶಿಲ್ಪಿ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ 5ನೇ ಆಂಡ್ ನೇರ್ಚೆ ಹಾಗೂ ಮದನೀಯಂ ಮಜ್ಲಿಸ್ ತಾ.7/9/2024 ರಂದು ಟಿಪ್ಪು ನಗರ ದಾರುನ್ನಜಾತ್ ಸಂಸ್ಥೆಯಲ್ಲಿ ಜರಗಳಿದೆ.
ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಧ್ವಜಾರೋಹಣೆ 2 30 ಕ್ಕೆ ಮಕ್ಬರ ಝೀಯಾರತ್ 3 ಗಂಟೆಗೆ ಖತ್ಮುಲ್ ಕುರ್ಆನ್ ಮಜ್ಲಿಸ್ 4.30 ಕೆ ಉಸ್ತಾದರ ಸ್ಮಾರಕ ಭವನ ಉದ್ಘಾಟನೆ ಮಗ್ರಿಬ್ ನಮಾಝಿನ ಬಳಿಕ ಮದನಿಯಂ ಮಜ್ಲಿಸ್ ಮತ್ತು ಅನುಸ್ಮರಣೆ ಕಾರ್ಯಕ್ರಮ ಜರಗಳಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಸಯ್ಯದ್ ಪೂಕುಞೀ ತಂಙಳ್,
ಅಸಯ್ಯದ್ ಸಿಹಾಬುದ್ದೀನ್ ತಂಙಳ್ ಮದಕ,
ಅಸಯ್ಯದ್ ಶಮೀಮ್ ತಂಙಳ್, ಕರ್ನಾಟಕ ಸ್ಪೀಕರ್ ಯು.ಟಿ ಖಾದರ್, ಮಹಮೂದಲ್ ಫೈಝಿ, ಇಬ್ರಾಹಿಂ ಪೈಝೀ, ಮಗ್ರಿಬ್ ನಮಾಝಿನ ಬಳಿಕ ಮದನಿಯಂ ಮಜ್ಲಿಸ್ ಅಬ್ದುಲ್ ಲಿತೀಫ್ ಸಖಾಫಿ ನೆತೃತ್ವದಲ್ಲಿ ಜರಗಲಿದೆ ಹಾಗೂ ಹಲವು ಉಲೆಮಾ ಉಮರಾ ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಎಲ್ಲಾ ಸಾರ್ವಜನಿಕರು ಸುನ್ನಿ ಕಾರ್ಯಕರ್ತರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಮ್ ದಾರುನ್ನಜಾತ್ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





