December 18, 2025

ಕೋಮು-ಕೋಮುಗಳ ಬಗ್ಗೆ ವಿಷ-ಬೀಜ ಬಿತ್ತುವ ದ್ವೇಷ ಭಾಷಣವನ್ನು ಮಾಡಿದ ಉಜಿರೆ ದಂತ ವೈದ್ಯ ದಯಾಕರ್ ವಿರುದ್ಧ SDPI ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

0
IMG-20240906-WA0002.jpg

ಬೆಳ್ತಂಗಡಿ: ಉಜಿರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಸಮಾವೇಶದಲ್ಲಿ ಕೋಮು-ಕೋಮುಗಳ ಬಗ್ಗೆ ವಿಷ-ಬೀಜ ಬಿತ್ತುವ ದ್ವೇಷ ಭಾಷಣವನ್ನು ಮಾಡಿದ ಉಜಿರೆ ದಂತ ವೈದ್ಯ ದಯಾಕರ್ ವಿರುದ್ಧ SDPI ಉಜಿರೆ ಬ್ಲಾಕ್ ಸಮಿತಿ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಹಿಂದೂ ಸಮಾವೇಶದ ವೇದಿಕೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರು ಡಾ. ದಯಾಕರ್ ದಂತಾ ವೈದ್ಯರು ಬಹಿರಂಗವಾಗಿ ಅವರ ಕಾರ್ಯಕರ್ತರೊಂದಿಗೆ “ಕೇವಲ ಬಲಿಯಾಗುವುದು ಮಾತ್ರವಲ್ಲ ಬಲಿ ಕೊಡಲು ಸಿದ್ದರಿರಬೇಕು” ಹಾಗೂ “ದೇವಾಲಯದಲ್ಲಿ ತೀರ್ಥವನ್ನು ನೀಡುವ ಸಂದರ್ಭದಲ್ಲಿ ಶಾಪವನ್ನಿಟ್ಟು ತೀರ್ಥ ನೀಡಬೇಕೆಂದು” ಮಾತನಾಡಿರುತ್ತಾರೆ.

“ಜನ್ಮ ಕೊಡುವವಳು ತಾಯಿ ಆದರೆ, ಮರು ಜನ್ಮ ನೀಡುವವನು ವೈದ್ಯ” ಎಂದಾಗಿರುವಾಗ ಈ ವೈದ್ಯನು ಬಹಿರಂಗವಾಗಿ ಕೊಲೆಗೆ ಆಶ್ಚಾದನೆ ನೀಡುವುದಲ್ಲದೆ, ತೀರ್ಥಕ್ಕೆ ಶಾಪವನ್ನು ಇಟ್ಟು ದೇವಾಲಯದಲ್ಲಿ ಅರ್ಚಕನು ತೀರ್ಥವನ್ನು ನೀಡಬೆಕೆಂಬ ಹೇಳಿಕೆಯನ್ನು ನಿಡಿ ಕೋಮು-ಕೋಮುಗಳ ಬಗ್ಗೆ ವಿಷ-ಬೀಜ ಬಿತ್ತುವ ದ್ವೇಷ ಭಾಷಣವನ್ನು ಹರಡಿ ಸಮಾಜದಲ್ಲಿ ಜಾತಿಗಳ ಮದ್ಯೆ ಗಲಬೆ ಎಬ್ಬಿಸುವ ಹುನ್ನಾರದ ಸಂದೇಶವನ್ನು ಬಹಿರಂಗವಾಗಿ ಹೇಳಿರುತ್ತಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಉಜಿರೆ ಬ್ಲಾಕ್ ಸಮಿತಿ ಸದಸ್ಯರಾದ ಅಶ್ರಫ್ ಚಾರ್ಮಾಡಿ, ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ದಿಕ್ ಯು.ಪಿ, ಚಾರ್ಮಾಡಿ ಬ್ರಾಂಚ್ ಅಧ್ಯಕ್ಷರಾದ ರಹೀಮ್ ಚಾರ್ಮಾಡಿ, ಕುಂಟಿನಿ ಬ್ರಾಂಚ್ ಅಧ್ಯಕ್ಷರಾದ ಅಸೀರ್ ಕುಂಟಿನಿ, ಅಹ್ಮದ್ ಕಬೀರ್, ಅರೀಫ್ ಕುಂಟಿನಿ, ಅನ್ವರ್, ರೌಫ್ ಕುಂಟಿನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!