ಉಪ್ಪಿನಂಗಡಿ: ಪಿಎಫ್ಐ ಮುಖಂಡರ ಅಕ್ರಮ ಬಂಧನ ಹಿನ್ನೆಲೆ:
ಠಾಣೆಯ ಎದುರು ಜಮಾಯಿಸಿದ ಕಾರ್ಯಕರ್ತರು
ಉಪ್ಪಿನಂಗಡಿ: ಪಿಎಫ್ಐ ಮುಖಂಡರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡ ಕಾರಣ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.



ಪಿಎಫ್ಐ ಸ್ಥಳೀಯ ಮುಖಂಡರುಗಳಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಕಡವಿನಬಾಗಿಲು, ಝಕರಿಯಾ ಎಂಬವರು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ತಲವಾರು ದಾಳಿಯಲ್ಲಿ ನಿರಪರಾಧಿಗಳಿಗೆ ಅನ್ಯಾಯವಾಗಬಾರದೆಂಬ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಮಾತನಾಡಲು ಬಂದಂತಹ ಸಂದರ್ಭದಲ್ಲಿ ಪೊಲೀಸರು ಈ ಮೂವರು ಮುಖಂಡರನ್ನು ಠಾಣೆಯಲ್ಲಿ ಕೂರಿಸಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ.





