ಬೈಕ್, ಲಾರಿ ನಡುವೆ ಅಪಘಾತ: ಮೆಕ್ಯಾನಿಕ್ ಮೃತ್ಯು
ಕಲಬುರಗಿ: ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ರಿಂಗ್ ರೋಡ್‍ನ ಬಂದೂಕ್‍ವಾಲಾ ಕಾಟಾ ಹತ್ತಿರ ಇಂದು ಬೆಳಿಗ್ಗೆ ನಡೆದಿದೆ.
ಮೃತನನ್ನು ನಗರದ ಚುನ್ನಾಬಟ್ಟಿ ಏರಿಯಾ ನಿವಾಸಿಯಾದ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ ಜಿಲ್ಲೆಯ ಮುರುಮ್‍ದ ಅತೀಕ್ ತಂದೆ ಜಬ್ಬಾರ ಜವಳಿ (34) ಎಂದು ಗುರುತಿಸಲಾಗಿದೆ.
ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಅತೀಕ್ ಬೆಳಿಗ್ಗೆ ಬೈಕ್ ಮೇಲೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ-1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.





