February 3, 2026

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ಹುಕ್ಕಾ ಸೇದುತ್ತಿರುವ ವಿಡಿಯೋ ವೈರಲ್

0
image_editor_output_image-1364164367-1725095392780.jpg

ನವದೆಹಲಿ: ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪಕ್ಷದ ಕಚೇರಿಯಲ್ಲೇ ಹುಕ್ಕಾ ಸೇದುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ.

ವಿಶ್ವಹಿಂದೂ ಪರಿಷತ್ ಸದಸ್ಯ ಹಾಗೂ ಭಗ್ವಾ ಕ್ರಾಂತಿ ಸೇನಾ ಅಧ್ಯಕ್ಷ ಸಾದ್ವಿ ಪ್ರಾಚಿ ಸೇರಿದಂತೆ ಹಲವು ನೆಟ್ಟಿಗರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಾಚಿ, ಕಾಂಗ್ರೆಸ್ ನ ಸಂಸ್ಕೃತಿಯ ಪ್ರದರ್ಶನ! ಎಂಬ ಶೀರ್ಷಿಕೆ ಕೊಟ್ಟಿದ್ದು, ಪ್ರಧಾನಿ ಮೋದಿ ಅವರಿಗೆ ಹಿಂದೊಮ್ಮೆ ಜೀವ ಬೆದರಿಕೆ ಹಾಕಿದ್ದ ಸಂಸದ ಇಮ್ರಾನ್ ಮಸೂದ್ ಅವರೇ ಈಗ ಪಕ್ಷದ ಕಚೇರಿಯಲ್ಲಿ ಹುಕ್ಕಾ ಸೇದುತ್ತಿದ್ದಾರೆ, ಕಾಂಗ್ರೆಸ್ ನ ಮೌಲ್ಯಗಳನ್ನು ನೋಡಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!