February 3, 2026

ಸಲ್ಪರಿಕ್ ಆ್ಯಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿ

0
image_editor_output_image-712780215-1725087625514.jpg

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಆ್ಯಸಿಡ್ ಟ್ಯಾಂಕರ್‌ವೊಂದು ಕಾಲುವೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿ ನಿನ್ನೆ ಶುಕ್ರವಾರ ಸಾಯಂಕಾಲ ನಡೆದಿದೆ.

ಆಂಧ್ರದಿಂದ ಗೋವಾದತ್ತ ಸಲ್ಪರಿಕ್ ಆ್ಯಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿಗೆ ಪಲ್ಪಿಯಾಗಿಯಾಗಿದೆ. ಈ ಆಕಸ್ಮಿಕ ರಸ್ತೆ ಅವಘಡದಲ್ಲಿ ಸ್ವಲ್ಪರಿಕ್ ಆಸಿಡ್ ತುಂಬಿದ್ದ ಟ್ಯಾಂಕರ್ , ಲಾರಿ ಕ್ಯಾಬಿನ್ ನಿಂದ ಬೇರ್ಪಟ್ಟು ,ಜಖಂಗೊಂಡು ಸೋರಿಕೆಯಾಗಲಾರಂಭಿಸಿದೆ.ಸುದ್ದಿ ತಿಳಿದ ಅಗ್ನಿಶಾಮಕ , ಪೊಲೀಸ್ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಕೈಗೊಂಡು ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!