March 14, 2026

ದರ್ಶನ್ ಬಳ್ಳಾರಿ ಜೈಲ್ ಗೆ ಸ್ಥಳಾಂತರ: ಬೆಂಗಳೂರು ನ್ಯಾಯಾಲಯ ಆದೇಶ: ಕೈದಿಯಾಗಿ ನಟಿಸಿದ್ದ ಜೈಲಿಗೆ ಅಸಲಿ ಕೈದಿಯಾಗಿ ದರ್ಶನ್ ಶಿಫ್ಟ್

0
image_editor_output_image120926197-1724768650401

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ನಟ ದರ್ಶನ್​ಗೆ ರಾಜಾತಿಥ್ಯ ನೀಡುತ್ತಿರುವ ಫೋಟೊ, ವಿಡಿಯೋ ಬಹಿರಂಗವಾದ್ದರಿಂದ ಈಗ ದರ್ಶನ್‌ನನ್ನುಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ. ಹಾಗೆಯೇ ಇತರ 9 ಆರೋಪಿಗಳು ಕೂಡ ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರವಾಗಲಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿ ಶೀಟರ್‌ಗಳಾದ ವಿಲ್ಸನ್‌ ಗಾರ್ಡನ್‌ ನಾಗನೊಂದಿಗೆ ಕುರ್ಚಿ ಹಾಕಿ ಕುಳಿತು ಒಂದು ಕೈಯಲ್ಲಿ ಮಗ್‌ ಹಿಡಿದು, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿರುವ ಫೋಟೋ ಹಾಗೂ ಸ್ನೇಹಿತರೊಂದಿಗೆ ಮಾತನಾಡುವ ವಿಡಿಯೋ ಕಾಲ್‌ಗಳು ಬಹಿರಂಗಗೊಂಡ ಬಳಿಕ ಈ ಬೆಳವಣಿಗೆಗೆ ಕಾರಣವಾಗಿದೆ.
ದರ್ಶನ್‌ ಸೇರಿ 10 ಆರೋಪಿಗಳು ಸ್ಥಳಾಂತರ:
ರಾಜಾತಿಥ್ಯ ವಿಚಾರವಾಗಿ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರವಾದರೆ, ಇತರ ಆರೋಪಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಒಟ್ಟು 17 ಆರೋಪಿಗಳ ಪೈಕಿ ಪವಿತ್ರಾಗೌಡ, ಅನುಕುಮಾರ್‌, ದೀಪಕ್‌ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ಉಳಿದರೆ, ಇತರ14 ಆರೋಪಿಗಳಲ್ಲಿ ನಾಲ್ವರು ಈಗಾಗಲೇ ತುಮಕೂರು ಜೈಲ್ಲಿನಲ್ಲಿದ್ದಾರೆ. ಇತರ ಆರೋಪಿಗಳಾದ ಪವನ್‌, ನಂದೀಶ್‌, ರಾಘವೇಂದ್ರ ಮೈಸೂರು ಜೈಲು, ಪ್ರದೋಷ್‌ ಬೆಳಗಾವಿ, ಜಗದೀಶ್‌, ಲಕ್ಷ್ಮಣ್‌ ಶಿವಮೊಗ್ಗ, ವಿನಯ್‌ ವಿಜಯಪುರ, ಧನ್‌ರಾಜ್‌ ಧಾರವಾಡ, ನಾಗರಾಜ್‌ ಕಲಬುರಗಿ ಜೈಲುಗಳಿಗೆ ಸ್ಥಳಾಂತರವಾಗಲಿದ್ದಾರೆ.
9 ಬ್ಯಾರಕ್ ಗಳಿರುವ ಬಳ್ಳಾರಿ ಜೈಲಿನಲ್ಲಿ ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯ ಜೊತೆಗೆ ಸಿಸಿ ಕ್ಯಾಮೆರಾಗಳ ಕಣ್ಗಾವಲಿದೆ. ಜೈಲಿನಲ್ಲಿ ಅಟ್ಯಾಚ್ ಬಾತ್ ರೂಂ ಇರುವ ಸೆಲ್ ಗಳಿದ್ದು, ಅವೇ ಸೆಲ್ ಗಳಲ್ಲಿ ದರ್ಶನ್ ಅವರನ್ನ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಕೈದಿಯಾಗಿ ನಟಿಸಿದ್ದ ಜೈಲಿಗೆ ಅಸಲಿ ಕೈದಿಯಾಗಿ ಶಿಫ್ಟ್?
ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಪಟಾಲಂ ಜೊತೆಗಿದ್ದ ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಆಗೋದು ಪಕ್ಕಾ ಆಗಿದೆ. ಅದರಲ್ಲೂ ತನ್ನದೇ ನಟನೆಯ ಚೌಕ ಸಿನಿಮಾ ಶೂಟಿಂಗ್ ನಡೆದ ಬಳ್ಳಾರಿ ಜೈಲಿಗೆ ದಾಸನ ಸ್ಥಳಾಂತರಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನ ಕೈದಿಯಾಗೇ ದರ್ಶನ್ ನಟಿಸಿದ್ದ ಎನ್ನುವುದೇ ಕಾಕತಾಳಿಯ.

Leave a Reply

Your email address will not be published. Required fields are marked *

error: Content is protected !!