March 14, 2026

ಕೊಡಾಜೆ ; ತರ್ಬಿಯತುಲ್ ಇಸ್ಲಾಂ ಮದರಸ ಹಿರಿಯ ವಿದ್ಯಾರ್ಥಿ ಸಂಘಟನೆಯ  ಅಧ್ಯಕ್ಷರಾಗಿ ರಹೀಮ್ ಸುಲ್ತಾನ್,  ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಕೊಡಾಜೆ  ಆಯ್ಕೆ

0
image_editor_output_image165539793-1724606347112

ಬಂಟ್ವಾಳ : ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಹಿರಿಯ ವಿದ್ಯಾರ್ಥಿ ಸಂಘಟನೆ ಇದರ ನೂತನ ಅಧ್ಯಕ್ಷರಾಗಿ ರಹೀಮ್ ಸುಲ್ತಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಲತೀಫ್ ಕೊಡಾಜೆ  ಆಯ್ಕೆಯಾಗಿದ್ದಾರೆ.

     ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ  ರಾಜಕಮಲ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕೊಡಾಜೆ ಮದರಸದಲ್ಲಿ ನಡೆದ ಸಂಘಟನೆಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.

    ಉಪಾಧ್ಯಕ್ಷರಾಗಿ ಸಮೀರ್ ನೆಡ್ಯಾಲ್,  ಜೊತೆ ಕಾರ್ಯದರ್ಶಿ ಯಾಗಿ ಸಿದ್ದೀಕ್ ನೆಡ್ಯಾಲ್, ಕೋಶಾಧಿಕಾರಿಯಾಗಿ ನಜೀರ್ ಕೆಂಪುಗುಡ್ಡೆ,  ಸಂಘಟನಾ ಕಾರ್ಯದರ್ಶಿಗಳಾಗಿ ಶಮ್ಮಾಸ್ ನೇರಳಕಟ್ಟೆ ಮತ್ತು ಉಸ್ಮಾನ್  ನೇಡ್ಯಾಲ್ ಅವರನ್ನು ಆಯ್ಕೆ ಮಾಡಲಾಯಿತು.

  ನಾಸಿರ್ ಕೊಡಾಜೆ, ನೌಫಳ್ ಕೊಡಾಜೆ, ಮಸೂದ್ ಹಾಜಿ ಕೊಡಾಜೆ, ಝುಬೈರ್ ಕಲ್ಲೋಲಿಗುಡ್ಡೆ, ರಾಝಿಕ್ ಕೊಡಾಜೆ, ತ್ವಾಹಾ ಕೊಡಾಜೆ, ಸವಾದ್ ನೇರಳಕಟ್ಟೆ, ಅಶ್ರಫ್ ಕೊಡಾಜೆ, ಸಾಬಿತ್ ಮಾಣಿ, ತನ್ ಝೀದ್ ಕೊಡಾಜೆ ಹಾಗೂ ಶಾಹಿಲ್ ಕಲ್ಪಾಡಿಗದ್ದೆ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಸಲಾಯಿತು.

     ಇಂಜಿನಿಯರ್ ಲತೀಫ್ ಕೊಡಾಜೆ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!