October 2, 2026

ವಿಟ್ಲ: ವಿಟ್ಠಲ ಪ್ರೌಢ ಶಾಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಸನ್ಮಾನ

0
image_editor_output_image-440358476-1790918101895

ವಿಟ್ಲ: ವಿಟ್ಲ ವಿಟ್ಠಲ ಎಜುಕೇಶನ್ ಸೊಸೈಟಿಯ ಪ್ರೌಢಶಾಲಾ ವಿಭಾಗದ ವತಿಯಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆ ಪ್ರಯುಕ್ತ ವಿಟ್ಲ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಪೌರಕಾರ್ಮಿಕರಾದ ರವಿ ಪ್ರಜ್ವಲ್, ಸದಾಶಿವ, ಹನುಮಂತ, ಗುಂಡ, ಚೌಡಮ್ಮ, ಹನುಮವ್ವ, ಶೋಭಾ ಮತ್ತು ಕುಮಾರಿ ಇವರನ್ನು ಗೌರವಿಸಲಾಯಿತು.

 

ಶಾಲೆಯ ಹಿರಿಯ ವಿದ್ಯಾರ್ಥಿ ಸರಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್, ಸದಸ್ಯರಾದ ಬಾಬು ಕೆ, ಸದಾಶಿವ ಬಿ, ನಿತ್ಯಾನಂದ ನಾಯಕ್, ಸುದರ್ಶನ ಪಡಿಯಾರ್, ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿದರು. ರಮೇಶ್ ಬಿ ಕೆ ವಂದಿಸಿದರು. ಶ್ರೀಹರಿ ನಿರೂಪಿಸಿದರು.
ಚರಿಶ್ಮಾ ಮತ್ತು ತನ್ವಿಶಾ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!