October 2, 2026

ಪುತ್ತೂರು: ನೆಕ್ಕಿಲ ನಿವಾಸಿ ಕೆರೆಗೆ ಬಿದ್ದು ಸಾವು

0
image_editor_output_image703251839-1790883679622

ಪುತ್ತೂರು: ಹಿರಿಯ ಯೋಗ ಗುರುವಾಗಿದ್ದ ಬನ್ನೂರು ನೆಕ್ಕಿಲ ನಿವಾಸಿ ಪ್ರಸಾದ್‌ ಪಾಣಾಜೆ(70) ಅವರು ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಅ.1ರಂದು ನಡೆದಿದೆ.

ಬೆಳಿಗ್ಗೆ ಬನ್ನೂರು ನೆಕ್ಕಿಲದಲ್ಲಿರು ತನ್ನ ತೋಟಕ್ಕೆ ಅಡಿಕೆ ಹೆಕ್ಕಲೆಂದು ತೆರಲಿದ್ದ ಅವರು ಬಹಳ ಸಮಯವಾದರೂ ಮನೆಗೆ ಹಿಂತಿರುಗದೇ ಇದ್ದಾಗ ಅವರ ಪತ್ನಿ ಹುಡುಕಿಕೊಂಡು ತೋಟಕ್ಕೆ ತೆರಳಿದಾಗ ತೋಟದಲ್ಲಿರುವ ಕೆರೆಯ ನೀರಿನಲ್ಲಿ ಅವರ ಮೃತ ದೇಹ ತೇಲುತ್ತಿರುವುದು ಕಂಡುಬಂದಿತ್ತು.

 

ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿ ಮೃತಪಟ್ಟಿರುವುದಾಗಿ ಮೃತರ ಪತ್ನಿ ಶ್ರೀಮತಿಯವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!