August 22, 2026

ಬಿ.ಸಿ.ರೋಡ್: MJF, MSB ಸಂಯುಕ್ತಾಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ

0
image_editor_output_image-63370314-1724491523872.jpg

ಬಂಟ್ವಾಳ: ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಮತ್ತು ಬಂಟ್ವಾಳ ಮುಸ್ಲಿಂ ಸಮಾಜ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಾಗಾರವು ಬಿ.ಸಿ.ರೋಡಿನ ರೋಟರಿ ಕ್ಲಬ್ ನಲ್ಲಿ ನಡೆಯಿತು.ಸ್ವಾತಂತ್ರ್ಯ ನಂತರದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದಂತಹ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದ ನಂತರ ಕೇಂದ್ರ ಸರ್ಕಾರ ಇತ್ತೀಚೆಗೆ ಭಾರತದಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಕಾನೂನುಗಳ ವ್ಯಾಪ್ತಿಯನ್ನು ಮತ್ತು ನಿಯಮಾವಳಿಗಳನ್ನು ಬದಲಾವಣೆ ಮಾಡಿದ ಬಗ್ಗೆ ಸಮಗ್ರವಾದ ವಿವರಣೆಯನ್ನು ಬೆಂಗಳೂರಿನ ವಕೀಲರಾದ ಮುಝಫರ್ ಅಹ್ಮದ್ ನೀಡಿದರು.ವಲಕೀಲ ಇಮ್ತಿಯಾಝ್ ಬಿ. ಮಾತನಾಡಿ, ಭಾರತದ ಕಾನೂನುಗಳ ಕಾರ್ಯಮಿತಿ ಮತ್ತು ಲೋಪದೋಷಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿ, ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ವಕ್ಫ್ ಬೊರ್ಡುಗಳಲ್ಲಿ ಮಾಡಿದಂತಹ ಬದಲಾವಣೆಗಳನ್ನು ಸಹ ಸಭೆಗೆ ವಿವರವಾಗಿ ತಿಳಿಸಿದರು.ಬಂಟ್ವಾಳ ಮುಸ್ಲಿಂ ಸಮಾಜದ ಅಧ್ಯಕ್ಷ ಕೆ.ಎಚ್. ಅಬೂಬಕರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಇದರ ಅಧ್ಯಕ್ಷ ಇರ್ಷಾದ್ ಯು.ಟಿ‌. ಸ್ವಾಗತಿಸಿ, ಬಂಟ್ವಾಳ ಮುಸ್ಲಿಂ ಸಮಾಜದ ಹಿರಿಯ ಸದಸ್ಯರಾದ ರಹೀಂ ಬಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಸ್ಲಿಂ ಜಸ್ಟೀಸ್ ಫೋರಂ ಇದರ ವಕ್ತಾರ ಹಾಗೂ ಬಂಟ್ವಾಳ ಮುಸ್ಲಿಂ ಸಮಾಜದ ಕಾರ್ಯದರ್ಶಿಗಳಾದ ಹನೀಫ್ ಖಾನ್ ಕೋಡಾಜೆ ಸಮಾರೋಪದ ಮಾತುಗಳನ್ನಾಡಿದರು.ಮುಸ್ಲಿಂ ಜಸ್ಟೀಸ್ ಫೋರಂ ಸದಸ್ಯ ಸಲಾಂ ಉಚ್ಚಿಲ್ ವಂದಿಸಿದರು. ಮುಸ್ಲಿಂ ಸಮಾಜ ಬಂಟ್ವಾಳದ ಸದಸ್ಯ ಇಕ್ಬಾಲ್ ಐಎಂಆರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!