ಕಬಕ ಜಂಕ್ಷನ್ ನಿಲ್ಲಿಸಿದ ವಾಹನಗಳ ಮೇಲೂ ಕೇಸ್: ಪೊಲೀಸರು, ಸಾರ್ವಜನಿಕರ ನಡುವೆ ವಾಗ್ವಾದ
ಪುತ್ತೂರು: ಪುತ್ತೂರು ವಿಭಾಗದ ಹೈವೇ ಗಸ್ತು ವಿಭಾಗದ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ.
ಕಬಕ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು ಪೊಲೀಸರು ವಿನಾ ಕಾರಣ ದಂಡ ವಿಧಿಸುತ್ತಿರುವ ಕುರಿತಾಗಿ ಈ ವಾಗ್ವಾದ ನಡೆದಿದೆ.
ಕಬಕ ಜಂಕ್ಷನ್ ಬಳಿಯಲ್ಲಿ ನೆರಳಿನಲ್ಲಿ ನಿಲ್ಲಿಸಿದ ವಾಹನಗಳ ಮೇಲೂ ಕೇಸು ಜಡಿದ ಬಗ್ಗೆ ಸಾರ್ವಜನಿಕು ಆಕ್ರೋಶ ಗೊಂಡಿದ್ದರು. ದಿನಕೂಲಿ ಕಾರ್ಮಿಕನೊಬ್ಬ ಮರದ ಅಡಿಯಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದಾಗ ಸ್ಥಳಕ್ಕೆ ಬಂದ ಹೈವೇ ಗಸ್ತು ವಿಭಾಗದ ಪೊಲೀಸರು ಆ ಬೈಕ್ ಮೇಲೆ ಕೇಸು ಹಾಕಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ವೇಳೆ ಬೈಕ್ ಮಾಲೀಕ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು.




