ವಿಟ್ಲ: ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಬಾಲಕ-ಬಾಲಕಿಯರ ವಿಭಾಗದಲ್ಲಿ ಸೈಂಟ್ ರೀಟಾ ಶಾಲೆ ಪ್ರಥಮ
ವಿಟ್ಲ: ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಟ್ಲ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ಜರಗಿತು
ಪಂದ್ಯಾಟವನ್ನು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಉದ್ಝಾಟಿಸಿದರು.
ಗ್ರಾಮ ಪಂಚಾಯತಿ ಸದಸ್ಯಮೊಯ್ದಿನ್ ಹಾಜಿ ಬೈರಿಕಟ್ಟೆ. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಘುರಾಮ ಶೆಟ್ಟಿ. ಎಸ್.ಡಿ.ಎಂ.ಸಿ. ಸದಸ್ಯಉಸ್ಮಾನ್ ಶಿರಂಕಲ್ಲು, ವಿಟ್ಲ ವಲಯ ಕ್ರೀಡಾಕೂಟಗಳ ನೋಡಲ್ ಅಧಿಕಾರಿ ಸುರೇಶ್ ಶೆಟ್ಟಿ, ಬಂಟ್ವಾಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಕನ್ಯಾನ ಸೂರ್ಯನಾರಾಯಣ ಭಟ್, ರಮ್ಯಾ ಕುಮಾರಿ ಮುಂತಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕನ್ಯಾನ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ರಮೇಶ್ ಪಂಜಾಜೆ ದೆಲಂತಬೆಟ್ಟು, ಚರ್ಚ್ ಧರ್ಮಗುರು ಸುನಿಲ್ ಪ್ರವೀಣ್ ಪಿಂಟೊ, ಕೆ.ಪಿ. ಗಂಗಾಧರ, ಮುಂತಾದವರು ಉಪಸ್ಥಿತರಿದ್ದರು.
ಹುಡುಗರ ವಿಭಾಗದಲ್ಲಿ
ಪ್ರಥಮ: ವಿಟ್ಲದ ಸೈಂಟ್ ರಿಟಾ ಪ್ರೌಢ ಶಾಲೆ
ದ್ವಿತೀಯ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗದ ಹುಡುಗಿಯರ ವಿಭಾಗದಲ್ಲಿ ಪ್ರಥಮ: ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ
ದ್ವಿತೀಯ: ಸೂರ್ಯ ಸರಕಾರಿ ಪ್ರೌಢಶಾಲೆ
ಸವಿತಾ ಸ್ವಾಗತಿಸಿದರು. ಚಂದ್ರಶೇಖರ ಕಣಿಯೂರು ವಂದಿಸಿದರು. ಶೋಭಾ ಮತ್ತು ವೀಣಾ ಭಟ್ ಕಾರ್ಯಕ್ರಮ ನಿರೂಪಿಸಿದರು.