February 2, 2026

ಮಂಗಳೂರು: ಅಡ್ಡೂರು ಪ್ರದೇಶ ಮಿನಿ ಪಾಕಿಸ್ತಾನ ಆಗಿದೆ: ಶಾಸಕ ಭರತ್ ಶೆಟ್ಟಿ

0
image_editor_output_image-280030711-1724390847153.jpg

ಮಂಗಳೂರು: ಕೈಕಂಬ ಪೊಳಲಿ ಸಂಪರ್ಕದ ಅಡ್ಡೂರು ಪ್ರದೇಶ ಮಿನಿ ಪಾಕಿಸ್ತಾನವಾಗಿದ್ದು ಇಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳೆ ಹೆದರುತ್ತಿದ್ದಾರೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಡಾ. ಭರತ್ ಶೆಟ್ಟಿ, ಈ ಪ್ರದೇಶ ಅಕ್ರಮ ಮರಳುಗಾರಿಕೆಗೆ ಕುಖ್ಯಾತಿ ಪಡೆದಿದ್ದು ಕಳೆದ ಹಲವಾರು ವರ್ಷಗಳಿಂದ ಸೇತುವೆ ಕೆಳ‌ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಆಗುತ್ತಾ ಇದೆ. ಆದ್ದರಿಂದ ಇದೀಗ ಹಾನಿಯಾಗಿದ್ದರಿಂದ ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ ಎಂದರು.

ಸೇತುವೆ ದುರಸ್ತಿ ಕಾಮಗಾರಿ ಮುಗಿಯುವವರೆಗೆ ಈ ಭಾಗದಲ್ಲಿ ಘನ ವಾಹನ ಸಂಚಾರ ನಿಷೇಧಕ್ಕೆ ಜಿಲ್ಲಾಡಳಿತ ಆದೇಶ ಮಾಡಿದೆ. ಇಲ್ಲಿ ಕಳೆದ ಅನೇಕ ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಒಂದುವರೆ ವರ್ಷಗಳಿಂದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳುತ್ತಾ ಇದ್ದು, ಅನೇಕ ಬಾರಿ ಮರಳು ಅಕ್ರಮ ಅಡ್ಡೆಗಳ ಮೇಲೆ ದಾಳಿ ಮಾಡಿ ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಆರಂಭಗೊಂಡಿದೆ ಅಂದರೆ ಈ ಪ್ರದೇಶ ಒಂದು ಮಿನಿ ಪಾಕಿಸ್ತಾನ ಆಗಿದೆ. ಈ‌ ಭಾಗದಲ್ಲಿ ಅಧಿಕಾರಿಗಳು ಹೋಗಲು ಹೆದರುವಂತಾಗಿದೆ. ಅಧಿಕಾರಿಗಳು ದಾಳಿ ಮಾಡಿದರು ರಾತ್ರಿ ವೇಳೆ ಮರಳುಗಾರಿಕೆ ಮಾಡುತ್ತಾ ಇರುತ್ತಾರೆ. ಅಧಿಕಾರಿಗಳು ಹೋದಾಗ ಮರಳುಗಾರಿಕೆ ನಿಲ್ಲಿಸುತ್ತಾರೆ ಬಳಿಕ ಆರಂಭಿಸುತ್ತಾರೆ‌ ಅಂದ ಅವರು ಜಿಲ್ಲಾ ಮಂತ್ರಿಗಳಿಗೆ ಈ‌ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲುಸಲು ಆಗುತ್ತ ಇಲ್ವಾ ಎಂದು ಸವಾಲು ಹಾಕಿದರು. ಜಿಲ್ಲೆಯ ಎಲ್ಲಾ ಭಾಗದಲ್ಲಿ ಅಕ್ರಮ ಮರಳುಗಾರಿಕೆ ತಡೆಯುತ್ತಾರೆ, ಆದರೆ ಅಡ್ಡೂರಿನಲ್ಲಿ ಆಗಲ್ವ..? ಈ ಭಾಗದಲ್ಲಿ ಲೈಸೆನ್ಸ್ ಇರುವವರು ಯಾರು ಇಲ್ಲ ಮತ್ತು ಮಳೆಗಾಲದಲ್ಲಿ ಯಾರು ಮರಳುಗಾರಿಕೆ ಮಾಡುವಂತಿಲ್ಲ, ಆದರೂ ಈ ಭಾಗದಲ್ಲಿ ನಿತ್ಯ ಮರಳುಗಾರಿಕೆ ಆಗುತ್ತಾ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!