March 24, 2026

ಮಣಿಪಾಲ: 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-928232250-1724307331758.jpg

ಮಣಿಪಾಲ: 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟಿನ ಆರೋಪಿಯನ್ನು ಪತ್ತೆ ಮಾಡಿ, ಮಣಿಪಾಲ ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

1992 ರಲ್ಲಿ, ಶಿವರಾಮ ಎಂಬವರು ಮಣಿಪಾಲ ಠಾಣೆಯಲ್ಲಿ ಪ್ರಕರಣ 12 ಜನರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಗಣೇಶ್‌ ಪ್ರಭು (54), ಬಡಗಬೆಟ್ಟು, ಮಣಿಪಾಲ, ಉಡುಪಿ, ಅವರು 2001 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ, ತಲೆಮರೆಸಿಕೊಂಡಿದ್ದರು. ಇದರ ಹಿನ್ನಲೆಯಲ್ಲಿ,ಆತನ ವಿರುದ್ಧ ಎಲ್‌ಪಿ‌ಸಿ ವಾರಂಟ್‌ ಹೊರಡಿಸಲಾಗಿತ್ತು.

ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಘವೇಂದ್ರ ಸಿ ಮತ್ತು ಹೆಚ್‌ಸಿ ಪ್ರಸನ್ನ ಉಪ್ಪೂರು ನೇತೃತ್ವದ ತಂಡ, 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬೃಹತ್ ಶೋಧಕಾರ್ಯ ನಡೆಸಿ, ಬೆಂಗಳೂರಿನಲ್ಲಿ ವಾಸವಿದ್ದಾಗ ಪತ್ತೆಹಚ್ಚಿ, 2024ರ ಆಗಸ್ಟ್ 21ರಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ಗಣೇಶ್‌ ಪ್ರಭು ಅವರನ್ನು ವಾರೆಂಟ್‌ನೊಂದಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!