ವಿಟ್ಲ: ಹೊರೈಝನ್ ಶಾಲೆಗೆ ಪ್ರಶಸ್ತಿ
ವಿಟ್ಲ: 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಶೇಕಡಾ ಉತ್ತೀರ್ಣತೆಯನ್ನು ಸಾಧಿಸಿದ್ದಕ್ಕಾಗಿ ಸಯ್ಯದ್ ಅಬ್ದುರ್ರಹ್ಮಾನ್ ತಂಙಳ್ ಬಾಫಕಿ ಫೌಂಡೇಶನ್ ಕರ್ನಾಟಕದಿಂದ ಹೊರೈಝನ್ ಪಬ್ಲಿಕ್ ಶಾಲೆಗೆ ಅತ್ಯುನ್ನತ ಗೌರವವನ್ನು ನೀಡಿದೆ.
ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು. ಮುಖ್ಯೋಪಾಧ್ಯಾಯ ಮನಾಝೀರ್ ಮುಡಿಪು ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.




