ಮಂಗಳೂರು: ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ
ಮಂಗಳೂರು : ನಗರದಲ್ಲಿ ಫುಟ್ಬಾಲ್ ಆಟದ ವಿಷಯವಾಗಿ ವಿವಾದ ಏರ್ಪಟ್ಟು ವಿದ್ಯಾರ್ಥಿಗಳ ಗುಂಪು ಮತ್ತೊಂದು ತಂಡದ ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆ ಹಿನ್ನಲೆ 9 ಜನರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಪ್ರತಿಷ್ಠಿತ ಎರಡು ಕಾಲೇಜಿನ ವಿದ್ಯಾರ್ಥಿಗಳ ನಡುವೆ ವಿವಾದ ಏರ್ಪಟ್ಟಿದ್ದು, ಫುಟ್ಬಾಲ್ ಆಟದ ವೇಳೆ ಮೊಹಮ್ಮದ್ ಮತ್ತು ಆತನ ಸ್ನೇಹಿತರಾದ ಮೊಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಪಾರಿಸ್ ಮತ್ತು ಮೊಹಮ್ಮದ್ ಜುನೈದ್ ಇನ್ನೊಂದು ಟೀಂಗೆ ಸಪೋರ್ಟ್ ಮಾಡಿದ್ದಾರೆ ಎಂದು ಅಪಾದಿಸಿ, ದಿಯಾನ್, ತಸ್ಲಿಂ, ಸಲ್ಮಾನ್ ಮತ್ತಿತರರು ಮೊಹಮ್ಮದ್ ರನ್ನು ಕಾರಿನಲ್ಲಿ ಅಪಹರಿಸಿ ಮಹಾಕಾಳಿ ಪಡ್ಡು ಬಳಿ ಕಾಲಿನಿಂದ ತುಳಿದು, ಸಿಗರೇಟ್ ನಿಂದ ಸುಟ್ಟು ಗಂಭಿರ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವರ ಸ್ನೇಹಿತರನ್ನು ಕರೆಸಿ ಕಾರಿನಲ್ಲಿ ಕೂರಿಸಿ ಪಡೀಲ್ ಕಣ್ಣೂರು ಬಳಿ ಖಾಲಿ ಸ್ಥಳದಲ್ಲಿ ಕರೆದುಕೊಂಡು ಹೋಗಿ ಅಲ್ಲಿಯೂ ಮರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳನ್ನು ಅರೆಬೆತ್ತಲೆಗೊಳಿಸಿ ಬಸ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





