February 3, 2026

ಉಳ್ಳಾಲ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

0
image_editor_output_image-659656988-1724051450252.jpg

ಉಳ್ಳಾಲ: ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಿವಿಧ ಪ್ರಕರಣಗಳ ಆರೋಪಿ ಅಶ್ರಫ್ ಯಾನೆ ಪೊಂಗ ಅಶ್ರಫ್ ಯಾನೆ ಡೈಮಂಡ್ ಅಶ್ರಫ್(31) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ತುಮಕೂರು ಸಮೀಪದ ದಾಬಸ್ ಪೇಟೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೊಣಾಜೆ ಪೊಲೀಸ್ ಠಾಣಾ ವಾರೆಂಟ್ ಆರೋಪಿ ಆಗಿದ್ದ ಈತ ಹರೇಕಳ ಗ್ರಾಮದ ಕಡೆಂಜತೋಟ ನಿವಾಸಿ ಆಗಿದ್ದು,ಈತನ ವಿರುದ್ದ ಕೊಣಾಜೆ ಠಾಣೆ, ಉಳ್ಳಾಲ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ಕೊಣಾಜೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಈತನು ಸುಮಾರು 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!