ಪುತ್ತೂರು: ಬೈಕ್–ಪಿಕಪ್ ನಡುವೆ ಢಿಕ್ಕಿ; ಬೈಕ್ ಸವಾರ ಸಾವು
ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಕಾವು ಬಳಿ ನಡೆದ ಅಪಘಾತದಲ್ಲಿ ಸೆಲೂನ್ ಮಾಲಕರೊಬ್ಬರು ಇಹಲೋಕ ತ್ಯಜಿಸಿದ್ದಾರೆ.
ಅಮ್ಚಿನಡ್ಕ ಎಂಬಲ್ಲಿ ಸೆಲೂನ್ ನಡೆಸುತ್ತಿದ್ದ ಸುರೇಶ್ ಭಂಡಾರಿ ಮೃತದುರ್ದೈವಿಯಾಗಿದ್ದು, ಇಂದು ಮುಂಜಾನೆ(ಆ.18) ಅಂಗಡಿಗೆ ತೆರಳುವ ವೇಳೆ ಈ ಅಪಘಾತ ನಡೆದಿದೆ.
ಮಾಡೂರು ಗ್ರಾಮದ ಕಾವು ಬಜಕುಡೇಲು ನಿವಾಸಿಯಾಗಿರುವ ಸುರೇಶ್ ಭಂಡಾರಿ ಅಮ್ಚಿನಡ್ಕ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ಸೆಲೂನ್ ನಡೆಸುತ್ತಿದ್ದರು.
ಎಂದಿನಂತೆ ಇಂದು ಮುಂಜಾನೆ ಮನೆಯಿಂದ ಅಂಗಡಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಸುಳ್ಯ ಕಡೆಯಿಂದ ಕಾವು ಕಡೆಗೆ ಬರುತ್ತಿದ್ದ ಪಿಕಪ್ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ.




