February 2, 2026

ಜಮೀನಿನಲ್ಲಿ ಹೋಗಿದ್ದ ಯವಕರಿಬ್ಬರು ವಿದ್ಯುತ್ ತಗುಲಿ ಮೃತ್ಯು

0
image_editor_output_image-1730600284-1723964870609.jpg

ಪಾವಗಡ: ತಾಲ್ಲೂಕಿನ ಟಿಎನ್ ಬೆಟ್ಟ ಬಳಿಯ ಜಮೀನಿನಲ್ಲಿ ಶೇಂಗಾ ಬೆಳೆ ಕಾವಲಿಗೆ ಹೋಗಿದ್ದ ಯವಕರಿಬ್ಬರು ವಿದ್ಯುತ್ ತಗುಲಿ ಶುಕ್ರವಾರ ರಾತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗ್ರಾಮದ ಅನಿಲ್(29), ಪುಟ್ಟರಾಜು(34) ಮೃತರು. ಶುಕ್ರವಾರ ರಾತ್ರಿ ಶೇಂಗಾ ಬೆಳೆ ಕಾವಲಿಗಾಗಿ ಇಬ್ಬರೂ ಜಮೀನಿನ ಬಳಿ ಹೋಗಿದ್ದಾರೆ. ಕಾಡು ಹಂದಿ, ಕರಡಿಗಳು ಬಾರದಂತೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಪುಟ್ಟರಾಜು ಮೃತಪಟ್ಟಿದ್ದಾರೆ.

ಪುಟ್ಟ ರಾಜು ಅವರನ್ನು ಕಾಪಾಡಲು ಟ್ರಾನ್ಸ್ ಫಾರ್ಮರ್ ಕಡೆ ಓಡಿ ಹೋಗುತ್ತಿದ್ದ ಅನಿಲ್ ಅವರಿಗೂ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!