February 1, 2026

ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0
IMG-20240817-WA0007.jpg

ಬಂಟ್ವಾಳ: ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲಾ ಸಂಚಾಲಕರಾದ ಇಸುಬು ತಾಳಿತನೊಜಿ ಧ್ವಜಾರೋಹಣ ನೆರವೇರಿಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಪಿಎನ್ ಶ್ರೀಕಾಂತ್ ಭಟ್ ಕೋಶಾಧಿಕಾರಿ ನಾರಾಯಣ ಶೆಟ್ಟಿ ಕುಲ್ಯಾರು ಉಪಸ್ಥಿತರಿದ್ದರು. ಮಾದಕಟ್ಟೆ ಶಾಲೆಯಿಂದ ಬ್ಯಾಂಡ್ ವಾದ್ಯಗಳೊಂದಿಗೆ ಮದಕದ ವರೆಗೆ ಮೆರವಣಿಗೆ ನಡೆಸಲಾಯಿತು. ಪುರುಷೋತ್ತಮ ಮದಕ ಮಹಮ್ಮದ್ ಮದಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಮತ್ತು ತಂಪು ಪಾನೀಯ ವಿತರಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಶೌರ್ಯ ತಂಡದ ಸದಸ್ಯರಾದ ಗಣೇಶ್ ಕೆಬಿ ಜಯಶ್ರೀ ನವೀನ್ ಕಜಿ ಪುಸ್ತಕ ಮತ್ತು ಪೆನ್ಸಿಲ್ ವಿತರಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಕೆಬಿ, ಉಪಾಧ್ಯಕ್ಷರಾದ ಜೈನಾಬು ಮದಕ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ನಝೀರ್ ಕರೆಯಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಬಾರೆಬೆಟ್ಟು ಉಪಸ್ಥಿತರಿದ್ದರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ‌ ಎಂ. ಈಶ್ವರ ಭಟ್ ಶಾಲಾ ಶಿಕ್ಷಕಿ ಸ್ವಾತಿಪ್ರಿಯ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಎನ್ ಹರೀಶ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಫಾತಿಮಾ ಎಂ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕಿ ಸುನೀತಾ ಎಂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!