February 1, 2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಬಕ ಬ್ಲಾಕ್ ಸಮಿತಿ ವತಿಯಿಂದ ಧ್ವಜಾರೋಹಣ

0
IMG-20240817-WA0006.jpg

ಕಬಕ: 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಕಬಕ ಜಂಕ್ಷನ್ ನಲ್ಲಿ ನಡೆಯಿತು.

ಕಬಕ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಉರಿಮಜಲು ಧ್ವಜಾರೋಹಣ ನೆರವೇರಿಸಿದರು. SDPI ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿ, “ವಿವಿಧ ಧರ್ಮ, ಭಾಷೆಗಳನ್ನೊಳಗೊಂಡ ನಮ್ಮ ಭಾರತ ದೇಶವು ಇತರ ಎಲ್ಲಾ ದೇಶಗಳಿಗೆ ಹೋಲಿಸಿದರೆ ಸ್ವರ್ಗ ತಾಣವಾಗಿದೆ. ಇಂತಹ ದೇಶದಲ್ಲಿ ಜನಿಸಿದ ನಾವು ಪುಣ್ಯವಂತರು, ಧರ್ಮಗಳ ನಡುವೆ ವೈಷಮ್ಯ ಮರೆತು ಪರಸ್ಪರ ಅನ್ಯೋನ್ಯತೆಯಿಂದ ಪ್ರೀತಿಯಿಂದ ಬದುಕಬೇಕು” ಎಂದು ಹೇಳಿದರು.

ಸಂದೇಶ ಭಾಷಣ ಮಾಡಿದ SDPI ಪುತ್ತೂರು ವಿಧಾನಸಭಾ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಏ.ಕೆ ಅವರು ಮಾತನಾಡಿ “ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಜೊತೆ ಕೈ ಜೋಡಿಸಿದ್ದ ಫ್ಯಾಸಿಸ್ಟ್ ಶಕ್ತಿಗಳು ಇವತ್ತು ನಮ್ಮ ದೇಶವನ್ನು ಆಳುತ್ತಿರುವುದು ನಮ್ಮ ಧೌರ್ಭಾಗ್ಯ, ಇಂತಹ ಫ್ಯಾಸಿಸ್ಟ್ ಶಕ್ತಿಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮಗೆ ನೀಡಿದ ಸಂವಿದಾನ ಮೂಲಕ ಅಧಿಕಾರದಿಂದ ಕಿತ್ತೊಗೆಯುವ ತನಕ ನಮ್ಮ ಹೋರಾಟ ಮುಂದುವರೆಯುತ್ತಿರಬೇಕು” ಎಂದು ಸಂದೇಶ ನೀಡಿದರು.

ವೇದಿಕೆಯಲ್ಲಿ ಎಸ್‌ಡಿ.ಪಿ.ಐ ವಿಧಾನ ಸಭಾ ಸದಸ್ಯರಾದ ರಹಿಮಾನ್ ಪುತ್ತೂರು, ಎಸ್‌ಡಿ.ಪಿ.ಐ ಕಬಕ ಬ್ಲಾಕ್ ಕಾರ್ಯದರ್ಶಿ ಸದ್ದಾಂ ಮುರ, ಎಸ್‌ಡಿ.ಪಿ.ಐ ಕಬಕ ಬ್ಲಾಕ್ ಸಮಿತಿಯ ಸದಸ್ಯರಾದ ಅದ್ದು ಕೊಡಿಪ್ಪಾಡಿ, ಎಸ್‌ಡಿ.ಪಿ.ಐ ಮಿತ್ತೂರು ಬೂತ್ ಸಮಿತಿ ಅಧ್ಯಕ್ಷರಾದ ರಝಾಕ್ ಕೆದುವಡ್ಕ, ಕಬಕ ಬೂತ್ ಸಮಿತಿ ಅಧ್ಯಕ್ಷರು ಮತ್ತು ಕಬಕ ಗ್ರಾಮ ಪಂಚಾಯತ್ ಸದಸ್ಯರಾದ ನಝೀರ್ ಕಬಕ, ಉರಿಮಜಲು ಬೂತ್ ಸಮಿತಿ ಅಧ್ಯಕ್ಷರಾದ ಶರೀಫ್ ಎಂ.ಎಂ, ಮುರ ಬೂತ್ ಸಮಿತಿ ಅಧ್ಯಕ್ಷರಾದ ಶಮೀರ್ ಮುರ ಉಪಸ್ಥಿತರಿದ್ದರು.

ಎಸ್.ಡಿ.ಪಿ.ಐ ಕ್ಯಾಡರ್ ಗಳು ಹಿತೈಷಿಗಳು ಪಾಲ್ಗೊಂಡರು. ಕಬಕ ಗ್ರಾಮ ಪಂಚಾಯಿತಿ ಸದಸ್ಯರಾದ ಫಾರೂಕ್ ತವಕ್ಕಲ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!