ಬೆಂಗಳೂರು: ಝಮ್ ಝಮ್ ವೇಲ್ ಫೇರ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಮತ್ತು ವೀಲ್ ಚೆಯರ್ ವಿತರಣೆ
ಬೆಂಗಳೂರು: ಝಮ್ ಝಮ್ ವೇಲ್ ಫೇರ್ ಟ್ರಸ್ಟ್ ರಾಜೇಂದ್ರ ನಗರ ಕೋರಮಂಗಲ, ಬೆಂಗಳೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಜಂಟಿ ಆಶ್ರಯದಲ್ಲಿ ರಾಜೇಂದ್ರ ನಗರದಲ್ಲಿ ಯಶಸ್ವಿ ರಕ್ತದಾನ ಶಿಬಿರ ಹಾಗೂ ವೀಲ್ ಚಯರ್ ವಿತರಣೆ.





ಯಶಸ್ವಿ ರಕ್ತದಾನ ಶಿಬಿರವು ನಾರಾಯಣ ರಕ್ತ ನಿಧಿ ಬೆಂಗಳೂರು ಸಹಭಾಗಿತ್ವದಲ್ಲಿ ನಡೆಯಿತು. ರಕ್ತದಾನ ಶಿಬಿರದಲ್ಲಿ ಹಲವಾರು ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಯಾದರು. ರಕ್ತದಾನ ಮಾಡಿದ ದಾನಿಗಳಿಗೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಝಮ್ ಝಮ್ ವೆಲ್ ಫೇರ್ ಸಂಸ್ಥೆಯ ವತಿಯಿಂದ ಅಂಗ ವಿಕಲ ಮಹಿಳೆಗೆ ವೀಲ್ ಚಯರ್ ವಿತರಿಸಲಾಯಿತು. ಸಾವಿರಕ್ಕೂ ಅಧಿಕ ಸಾರ್ವಜನಿಕರಿಗೆ ಅನ್ನದಾನ ಮಾಡಲಾಯಿತು.
ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ, ಮಾಮೂರ್ ಮಸೀದಿ ಅಧ್ಯಕ್ಷರಾದ ರಿಹಾನ್ ನವಾಬ್,
ಮಾಮೂರ್ ಮಸೀದಿಯ ಕಾರ್ಯದರ್ಶಿ, ಇಕ್ಬಾಲ್ ಸಾಬ್, ರಿಝ್ಮಾನ್ ಝಮ್ ಝಮ್, ಎಲ್ಮಾಸ್ ಗ್ರೂಪ್ ಆಫ್ ಹೋಟೆಲ್ ಮಾಲಿಕರಾದ ಆಧಿಲ್ ಎಲ್ಮಾಸ್, ಉದ್ಯಮಿ ಶಾಕೀರ್ ಉಪ್ಪಿನಂಗಡಿ, ಮಂಗಳೂರು ಉದ್ಯಮಿ ರಿಝ್ವಾನ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನಿರ್ವಾಹಕ ಅಶ್ರಫ್ ಅರಬಿ, ನಾಸೀರ್ ಉಲಾಯಿ ಬೆಟ್ಟು, ಒಳಿತು ಮಾಡು ಸಂಸ್ಥೆಯ ಕಾರ್ಯದರ್ಶಿ ಮುಬಾರಕ್ ಬೆಂಗಳೂರು
ಹಾಗು ಝಮ್ ಝಮ್ ಸಂಘಟನೆಯ ಮತ್ತು
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಪದಾಧಿಕಾರಿಗಳು, ಸದಸ್ಯರು ಶಿಸ್ತುಬದ್ಧವಾಗಿ ಎಲ್ಲರನ್ನೂ ಗೌರವಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು. ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳಿಗೆ, ರಕ್ತದಾನಿಗಳಿಗೆ, ಆಸ್ಪತ್ರೆ ಸಿಬ್ಬಂದಿವ ರ್ಗದವರಿಗೆ ಧ್ಯನವಾದಗಳು.
ಅಶ್ರಪ್ ಅರಬಿ ಕಲ್ಲಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




