ಎರಡು ವರುಷಗಳಿಂದ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ತವರಿಗೆ ಹೋಗಲು ಕೆಸಿಎಫ್ ನೆರವು

ತ್ವಾಯಿಫ್ ನ ಗರ್ವಾ ಎಂಬಲ್ಲಿಗೆ 2 ವರ್ಷಗಳ ಮುಂಚೆ ಉದ್ಯೋಗ ನಿಮಿತ್ತ ಬಂದ ಉಪ್ಪಿನಂಗಡಿಯ ಕರಾಯ ನಿವಾಸಿ ಆಸಿಫ್ ಇಕ್ಬಾಲ್ ಎಂಬವರಿಗೆ ತನ್ನ ಸ್ಪೋನ್ಸರ್ (ಕಫೀಲ್) ಇಖಾಮ ಮಾಡಿಕೊಡದೆ , ವೇತನವು ಸರಿಯಾಗಿ ನೀಡದೆ ಸತಾಯಿಸುತ್ತಿದ್ದರು.
ವಿಷಯ ತಿಳಿದ ಕೆಸಿಎಫ್ ಜಿದ್ದಾ ಝೋನ್ ನೇತಾರರು ಕರಾಯದ ಆ ಅಸಹಾಯಕ ಸಹೋದರನಿಗೆ ಬೇಕಾದ ಏರ್ಪಾಡುಗಳನ್ನು ಮಾಡಲು *ಕೆಸಿಎಫ್ ತಾಯಿಫ್ ಸೆಕ್ಟರ್* ನೇತಾರರಿಗೆ ತಿಳಿಸಿದರು.
ತಕ್ಷಣ ಸ್ಪಂದಿಸಿದ ಕೆಸಿಎಫ್ ತ್ವಾಯಿಫ್ ನೇತಾರರು ಸಂಕಷ್ಟಕ್ಕೊಳಗಾದ ಸಹೋದರನನ್ನು ಬೇಟಿ ಮಾಡಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಿ ಸಹಕರಿಸಿದರು.
ಎರಡು ವರ್ಷದಿಂದ ಸಂಕಷ್ಟಕ್ಕೀಡಾದ ಅವರನ್ನು ಊರಿಗೆ ಕಳುಹಿಸಲು ಕುಟುಂಬಸ್ಥರು ಸಹಾಯ ಕೇಳಿದಾಗ ಕೆಸಿಎಫ್ ಸೆಕ್ಟರ್ ನೇತಾರರು ಭಾರತೀಯ ರಾಯಭಾರ ಕಛೇರಿಯನ್ನು ಸಂಪರ್ಕಿಸಿ ಊರಿಗೆ ತೆರಳಲು ಫೈನಲ್ ಎಕ್ಸಿಟ್ ದಾಖಲೆ ಎಲ್ಲಾ ರೆಡಿ ಮಾಡಿ ಸಹಕರಿಸಿದರು ಮತ್ತು ವಿಮಾನದ ಟಿಕೆಟ್ ಖರ್ಚನ್ನು *ಕೆಸಿಎಫ್ ಜಿದ್ದಾ ಝೋನ್* ವಹಿಸಿಕೊಂಡಿತು.