February 2, 2026

ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

0
IMG-20240815-WA0035.jpg

ಬೆಳ್ತಂಗಡಿ: 78 ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿ ಪಕ್ಷದ ಕಛೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಎಸ್‌ಡಿಪಿಐ ಬೆಳ್ತಂಗಡಿ ನಗರ ಸಮಿತಿಯ ಅಧ್ಯಕ್ಷರಾದ ರಿಯಾಝ್ ಐ.ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂದೇಶ ಭಾಷಣ ಮಾಡಿದರು. ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಮತ್ತು ನಾಯಕರು ಉಪಸ್ಥಿತರಿದ್ದರು. ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ತೆಕ್ಕಾರು ಬಾಜಾರು, ಕುದ್ರಡ್ಕ, ಪುಂಜಾಲಕಟ್ಟೆ, ಮದ್ದಡ್ಕ, ಸುನ್ನತ್ ಕೆರೆ, ಪಡಂಗಡಿ, ಪೆರಾಡಿ, ತೆಂಕಕರಂದೂರು, ಲಾಯಿಲ, ಕಾಜೂರು, ಚಾರ್ಮಾಡಿ, ಕುಂಟಿನಿ, ಕಕ್ಕೇಜಾಲುನಲ್ಲಿ ವಿಜ್ರಂಭಣೆಯಿಂದ 78 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆಯಿತು.

ಪಕ್ಷದ ಮುಖಂಡರಾದ ಇನಾಸ್ ರೋಡ್ರಿಗಸ್, ನಿಸಾರ್ ಕುದ್ರಡ್ಕ, ಹನೀಫ್ ಪುಂಜಾಲಕಟ್ಟೆ, ಅಶ್ಫಾಕ್ ಪುಂಜಾಲಕಟ್ಟೆ, ಸಾದಿಕ್ ಲಾಯಿಲ, ಅಶ್ರಫ್ ಬದ್ಯಾರ್, ಮಹಮ್ಮದ್ ಅಲಿ ಉಜಿರೆ, ಫಝಲ್ ರಹಮಾನ್, ಅಶ್ರಫ್ ಚಾರ್ಮಾಡಿ, ಅಶ್ರಫ್ ಕಟ್ಟೆ, ನಿಜಾಮ್ ಕಟ್ಟೆ, ಮುಸ್ತಾಫ ಜಿ. ಕೆರೆ, ಸ್ವಾಲಿ ಮದ್ದಡ್ಕ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಿಲ್ಲೂರು ಬ್ರಾಂಚ್ ಸಮಿತಿ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ಕಿಲ್ಲೂರು ನ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!