ಎಂಜಿಆರ್ ಕಾರ್ಪೋರೇಷನ್ ವತಿಯಿಂದ ವಿಟ್ಲದ ಸ್ಮಾರ್ಟ್ ಸಿಟಿ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ
ವಿಟ್ಲ ಪಟ್ಟಣದ ಹೃದಯ ಭಾಗದಲ್ಲಿರುವ ಸ್ಮಾರ್ಟ್ ಸಿಟಿ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಎಂಜಿಆರ್ ಕಾರ್ಪೋರೇಷನ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಭರ್ಜರಿಯಾಗಿ ಆಚರಿಸಲಾಯಿತು.
ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಫ್ ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ವಕ್ತಾರರಾದ ರಮಾನಾಥ ವಿಟ್ಲ ಅವರಿಂದ ಧ್ವಜಾರೋಹಣ ನೆರವೇರಿತು. ನಂತರ ನೆರದಿದ್ದ ಸಭಿಕರಿಂದ ರಾಷ್ಟ್ರಗೀತೆ ಮೊಳಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಟೈಲ್ ಪಾರ್ಕ್ ನ ಮಾಲೀಕರಾದ ಅಬ್ದುಲ್ಲ ಹಾಜಿ, ಪತ್ರಕರ್ತಮಹಮ್ಮದ್ ಅಲಿ, ಡಿ ಗ್ರೂಪ್ ವಿಟ್ಲದ ಅಧ್ಯಕ್ಷರಾದ ರಿಯಾಜ಼್ ವಿ ಹೆಚ್, ಟುಟು ಟ್ರೇಡಿಂಗ್ ನ ಪಾಲುದಾರರಾದ ಅಬ್ದುಲ್ ರೌಫ್, ಕಿಟ್ ಕ್ಯಾಟ್ ಪೆಟ್ ಫುಡ್ ಮಾಲೀಕರಾದ ಇಸ್ಮಾಯಿಲ್, ಶಮೀರ್, ಮೈ ಟಾಯ್ಸ್ ನ ರಹೀಮ್, ನವಾಜ಼್, ಉಬೈದ್, ಐಡಿಯಲ್ ಚಿಕನ್ ನ ಸಮದ್, ವಿಟ್ಲ ನಗರದ ಹಲವು ಗಣ್ಯರು ಹಾಗೂ ಎಂಜಿಆರ್ ಕಾರ್ಪೋರೇಷನ್ ನ ಪಾಲುದಾರರಾದ ಮಹಮ್ಮದ್ ರಫೀ, ಅಬ್ದುಲ್ ಮಜೀದ್, ಮಹಮ್ಮದ್ ಗೌಸ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಚೈತ್ರಾ ಕುಲಾಲ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಾರಿಜ಼ನ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಹಾಗೂ ನೆರೆದಿದ್ದವರಿಗೆ ಸಿಹಿ ವಿತರಿಸಲಾಯಿತು.





