ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿ: ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಕೆಮ್ಮಾಯಿ: ದೇಶದ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮುಈನುಲ್ ಇಸ್ಲಾಂ ಜಮಾಹತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ ಎಕೆ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬದ್ರಿಯಾ ದರ್ಸ್ ಕೆಮ್ಮಾಯಿ ಇದರ ಮುದರ್ರಿಸ್ ಮುಈನುದ್ದೀನ್ ಮದನಿ, ಬ್ರಿಟೀಷರ ದಾಸ್ಯತನದಿಂದ ಈ ದೇಶವನ್ನು ಮುಕ್ತಿಗೊಳಿಸಲು ಹೋರಾಟಕ್ಕೆ ನೇತೃತ್ವ ನೀಡಿದವರು ಮುಸ್ಲಿಂ ಸಮುದಾಯವಾಗಿದೆ. ಹಲವು ಮಂದಿ ಪ್ರಾಣತ್ಯಾಗ ಮಾಡಿ ಪಡೆದ ಈ ಸ್ವಾತಂತ್ರ್ಯವನ್ನು ನಾವು ಕಾಪಾಡಬೇಕಿದೆ ಎಂದರು.
ಮುಖ್ಯಭಾಷಣ ಮಾಡಿದ ಸದರ್ ಮುಅಲ್ಲಿಂ ಅಬ್ದುಲ್ ಜಲೀಲ್ ಝೈನಿ ಕೋಲ್ಪೆ ಸ್ವತಂತ್ರ ಭಾರತದ ಭವ್ಯ ಚರಿತ್ರೆಯ ಕುರಿತು ವಿವರಿಸಿದರು.
ಮಂಬವುಲ್ ಉಲೂಂ ಮದ್ರಸ ಹಾಗು ಬದ್ರಿಯಾ ದರ್ಸ್ ಕೆಮ್ಮಾಯಿ ಇದರ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಪದಾಧಿಕಾರಿಗಳಾದ ಹಸನ್ ಹಾಜಿ, ಹಕೀಂ ಡಿಕೆ, ಅಬ್ದುಲ್ ಖಾದರ್ ಮೋನಾಕ, ಹಾಗು ಜಮಾಅತ್ ನ ಪ್ರಮುಖರು ಉಪಸ್ಥಿತರಿದ್ದರು.
ಮುಅಲ್ಲಿಂ ಇಸ್ಮಾಯಿಲ್ ಮುಸ್ಲಿಯಾರ್ ಮುಕ್ವೆ ಸ್ವಾಗತಿಸಿದರು.
ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.





