ಗುಜರಾತ್: ಭಜರಂಗದಳ ಕಾರ್ಯಕರ್ತರಿಂದ ಪಾಕಿಸ್ತಾನಿ ಆಹಾರೋತ್ಸವದ ಬ್ಯಾನರ್‌ಗೆ ಬೆಂಕಿ
ಗುಜರಾತ್: ಬಜರಂಗದಳದ ಕಾರ್ಯಕರ್ತರ ಗುಂಪೊಂದು ಸೋಮವಾರ ಸೂರತ್‌ನಲ್ಲಿ ‘ಪಾಕಿಸ್ತಾನಿ ಆಹಾರೋತ್ಸವ’ವನ್ನು ಘೋಷಿಸಿದ ರೆಸ್ಟೋರೆಂಟ್‌ನ ಮೇಲೆ ಹಾರಿಸಲಾಗಿದ್ದ ಬೃಹತ್ ಬ್ಯಾನರ್ ಅನ್ನು ಕೆಳಗಿಳಿಸಿ ಬೆಂಕಿ ಹಚ್ಚಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಸೂರತ್ ನಗರದ ರಿಂಗ್ ರೋಡ್ ಪ್ರದೇಶದಲ್ಲಿರುವ ಟೇಸ್ಟ್ ಆಫ್ ಇಂಡಿಯಾ ರೆಸ್ಟೊರೆಂಟ್ ಮೇಲೆ ‘ಪಾಕಿಸ್ತಾನ ಫುಡ್ ಫೆಸ್ಟಿವಲ್’ ಘೋಷಣೆ ಮಾಡುವ ಬ್ಯಾನರ್ ರಾರಾಜಿಸಿತ್ತು.
ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ‘ಜೈ ಶ್ರೀ ರಾಮ್’, ‘ಹರ್ ಹರ್ ಮಹಾದೇವ್’ ಎಂದು ಘೋಷಣೆ ಕೂಗಿ ಎಲ್ಲ ಬ್ಯಾನರ್ ಗಳನ್ನು ತೆಗೆದು ಬೆಂಕಿ ಹಚ್ಚಿದರು.
“ಭಜರಂಗ ದಳದ ಕಾರ್ಯಕರ್ತರು ಕಟ್ಟಡದಿಂದ ಫ್ಲೆಕ್ಸ್ ಬ್ಯಾನರ್ ತೆಗೆದು ಬೆಂಕಿ ಹಚ್ಚಿದ್ದಾರೆ. ಅಂತಹ ಹಬ್ಬವನ್ನು ಸಹಿಸುವುದಿಲ್ಲ. ರೆಸ್ಟೋರೆಂಟ್ ಕ್ಷಮೆಯಾಚಿಸಿದೆ” ಎಂದು ದಕ್ಷಿಣ ಗುಜರಾತ್ ಬಜರಂಗದಳದ ಅಧ್ಯಕ್ಷ ದೇವಿಪ್ರಸಾದ್ ದುಬೆ ಹೇಳಿದ್ದಾರೆ.





