ವಿಟ್ಲ: ಹೊರೈಝನ್ ಶಾಲೆ, ಸ್ವಾತಂತ್ರೋತ್ಸವ ಆಚರಣೆ-ವಿದ್ಯಾರ್ಥಿಗಳಿಂದ ಆಕರ್ಷಕ ಜಾಥಾ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಹಾಗೂ ಶಾಲಾ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್ ಧ್ವಜಾರೋಹಣ ಮಾಡಿದರು.
ಮಸೀದಿ ಖತೀಬ್ ದಾವೂದ್ ಹನೀಫಿ ದುವಾ ನೆರವೇರಿಸಿದರು. ಕಾರ್ಯದರ್ಶಿ ಅಬೂಬಕ್ಕರ್ ನೋಟರಿ,
ಟ್ರಸ್ಟಿಗಳಾದ ವಿ.ಎಚ್ ಅಶ್ರಫ್, ಶೀತಲ್ ಇಕ್ಬಾಲ್, ಅಝೀಝ್ ಸನ, ಇಕ್ಬಾಲ್ ಹಳೆಮನೆ,ಅಬ್ದುಲ್ ಹಮೀದ್ ಬದ್ರಿಯಾ,ಅಬ್ದುಲ್ ರಹಿಮಾನ್ ದೀಪಕ್,ಇಸಾಕ್ ಸಾಹೇಬ್, ಮಸೀದಿಯ ಕೋಶಾಧಿಕಾರಿ ಶರೀಫ್ ಪೊನ್ನೋಟು,ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಸ್ವಾಗತಿಸಿದರು.
ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ವಯನಾಡ್ ಜನತೆಗಾಗಿ ಮೌನ ಪ್ರಾರ್ಥನೆ ನಡೆಸಲಾಯಿತು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ವಿಟ್ಲ ನಗರದ ನಾಡಕಚೇರಿ ತನಕ ದೇಶಪ್ರೇಮ ದ ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ನಡೆಯಿತು.
ಉಪ ಮುಖ್ಯ ಶಿಕ್ಷಕಿ ಗಾಯತ್ರಿ ನಿರೂಪಿಸಿದರು.






