December 22, 2025

ಆಲಂಕಾರು:  ಸರಕಾರಿ  ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ  ಪೇಟೆ ಜಾತಾ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆ

0
image_editor_output_image-312197235-1723713174421

ಪುತ್ತೂರು: 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಅಲಂಕಾರು ಪೇಟೆ ಮೂಲಕ ಜಾತ ನಡಿಗೆ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅಲಂಕಾರು ಮುಖ್ಯಪೇಟೆಯಲ್ಲಿನ  ಎ&ಬಿ ಬಿಲ್ಡಿಂಗ್ ಅಂಗಡಿ ಮಾಲಕರು ಹಾಗೂ ಕರಾವಳಿ ಯೂಥ್ ಫ್ರೆಂಡ್ಸ್ ವತಿಯಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು. ಕರಾವಳಿ ತರಕಾರಿ ಮಾಲಕರದ ಸುಲೈಮಾನ್, ಕರಾವಳಿ ಡ್ರೈ ಫಿಶ್ ಮಾಲಕರಂತಹ ಜಲೀಲ್, ಶ್ರೀ ದುರ್ಗಾ ಗೋಬಿ ಮಂಚೂರಿ ಸ್ಟಾಲ್ ಮಾಲಕರಂತಹ ಜಗದೀಶ್, ಹೋಟೆಲ್ ರಾಯಲ್ ತಾಜ್ ಮಾಲಕರದ ಇರ್ಷಾದ್, ಕರಾವಳಿ ಚಿಕನ್ ಸೆಂಟರ್ ಮಾಲಕರ ಶರೀಫ್, ಪ್ಲಾಜಾ  ಸೂಪರ್ ಮಾರ್ಕೆಟ್ ಮಾಲಕರು ಹಾಗೂ ಎಲ್ಲಾ ನೌಕರವರ್ಗದವರು , ಎ&ಬಿ ಬಿಲ್ಡಿಂಗ್ ಮಾಲಕರಾದಂತಹ  ಸುಂದರ ಮತ್ತು ಕುಶಾಲಪ್ಪ, ಹಿರಿಯರು ಹಾಗೂ ಮಾರ್ಗದರ್ಶಕರು ಆದಂತಹ ಶ್ರೀ ಹರೀಶ್ ನೆಕ್ಕರೆ ಎಲ್ಲರೂ ಜೊತೆಗೂಡಿ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೆ ಹಾಗೂ ನೆಕ್ಕರೆ ನೂರುಲ್ ಹುದಾ ಮದರಸ ವಿದ್ಯಾರ್ಥಿಗಳಿಗೂ ಸಿಹಿ ತಿಂಡಿ ವಿತರಿಸುವ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!