December 21, 2025

ಪಿ ಎ ನಾಲೆಜ್ ಸಿಟಿ ಕ್ಯಾಂಪಸ್ನಲ್ಲಿ ವಿಜೃಂಭಣೆ 78 ಸ್ವಾತಂತ್ರ್ಯ ದಿನಾಚರಣೆ: ಭಾರತದ ಆರ್ಥಿಕ ಅಭಿವೃದ್ಧಿ ಯುವ ಪೀಳಿಗೆಯ ಜವಾಬ್ದಾರಿ- ಡಾ. ಸಜೀಶ್ ರಘುನಾಥನ್

0
IMG-20240815-WA0018

ಮಂಗಳೂರು:  78 ಸ್ವಾತಂತ್ರ್ಯ ದಿನಾಚರಣೆ ಪಿ.ಎ ಸಮೂಹ ಸಂಸ್ಥೆಗಳ ಪಿ ಎ ನಾಲೆಜ್ ಸಿಟಿ ಕ್ಯಾಂಪಸ್ನಲ್ಲಿ ವಿಜೃಂಭಣೆಯಲ್ಲಿ ಜರುಗಿತು.

ಪಿ.ಎ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಇದರ ಪ್ರಾಂಶುಪಾಲರಾದ ಡಾ. ಸಜೀಶ್ ರಘುನಾಥನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯದ ಪೂರ್ವದ ಭಾರತದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿ, ಆ ಆರ್ಥಿಕ ಹಿರಿಮೆಯನ್ನು ಮರಳಿ ಪಡೆಯಲು ಯುವ ಸಮೂಹ ತನ್ನ ಸಂಪೂರ್ಣ ಕೊಡುಗೆ ನೀಡಬೇಕೆಂದು ಆಗ್ರಹಿಸಿದರು.
ಪಿ. ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಇದರ ಪ್ರಾಂಶುಪಾಲರಾದ ಡಾ. ರಮೀಸ್ ಎಂ ಕೆ, ಪಿ. ಎ ಕಾಲೇಜ್ ಫಾರ್ಮಸಿ ಇದರ ಪ್ರಾಂಶುಪಾಲರಾದ ಡಾ.ಸಲೀಮುಲ್ಲಾ ಖಾನ್,  ಡಾ. ಶರ್ಮಿಳಾ ಕುಮಾರಿ, ಪ್ರೊ. ಸಮೀರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪಿ. ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫರಾಜ್ ಜೇ ಹಶೀಮ್, ಪಿ. ಎ ಸಮೂಹ ಸಂಸ್ಥೆಗಳ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಸಯ್ಯದ್ ಅಮೀನ್ ಅಹಮ್ಮದ್, ಪ್ರೊ.ಇಸ್ಮಾಯಿಲ್ ಖಾನ್,  ಡಾ. ಹರೀಕೃಷ್ಣನ, ವಿವಿಧ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಡಾ. ಇಕ್ಬಾಲ್, ದೈಹಿಕ ಶಿಕ್ಷಣ ನಿರ್ದೇಶಕ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!