ವಿಟ್ಲ: 16 ಬೋರ್ ವೆಲ್ ಪಂಪುಗಳ ಕಳವು ಪ್ರಕರಣ: ಆರೋಪಿಯನ್ನು ಬಂಧಿಸಿದ ಪೊಲೀಸರು
ವಿಟ್ಲ: ಕಳವು ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಡಬ ತಾಲೂಕು, ಪೆರಬೆ, ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಕೀರ್ ಬಂಧಿತ ಆರೋಪಿ.
21-07-2024 ರಿಂದ 22-07-2024ರ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್ ಗೌಡ ಎಂಬವರ ಮನೆಯ ಬಳಿಯಿರುವ ಕಟ್ಟಡದಲ್ಲಿ ಸಾರ್ವಜನಿಕರಿಂದ ರಿಪೇರಿಗಾಗಿ ಪಡೆದು ಇರಿಸಿದ್ದ ಅಂದಾಜು 1,81,000/- ರೂ ಮೌಲ್ಯದ ಒಟ್ಟು 16 ಬೊರ್‌ವೆಲ್ ಪಂಪುಗಳನ್ನು ಕಳ್ಳರು ಕಳ್ಳತನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ.119/2024 ಕಲಂ:303(2) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು, ಆ.14 ರಂದು ಆರೋಪಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರೂ 1,81,000/–ರೂ ಮೌಲ್ಯದ 16 ಬೊರವೆಲ್ ಪಂಪ್ ಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ವಾಹನ -01 ಇದರ ಅಂದಾಜು ಮೌಲ್ಯ 2,00,000/- ರೂ ಆಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಸ್ವಾದೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ- 3,81,000/- ರೂ ಆಗಬಹುದಾಗಿದೆ.
ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪರಾರಿಯಾಗಿರುತ್ತಾರೆ. ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ರವರ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಈ ರವರ ನಿರ್ದೇಶನದಂತೆ ವಿಟ್ಲ ಪೊಲೀಸರು ಬಂಧಿಸಿದ್ದಾರೆ.





