ಅಯೋಧ್ಯೆ: ರಾಮ್ ಪಥದಲ್ಲಿ ಅಳವಡಿಸಲಾಗಿದ್ದ 3,800 ಬೀದಿರಿನ ದೀಪಗಳು, ಪ್ರೊಜೆಕ್ಟರ್ ಲೈಟ್ ಕಳವು
ಉತ್ತರ ಪ್ರದೇಶ: ರಾಮಲಲ್ಲಾ ಮಂದಿರಕ್ಕೆ ಹೋಗುವ ರಾಮ್ ಪಥ್ ಮತ್ತು ಭಕ್ತಿ ಪಥದಲ್ಲಿ ಅಳವಡಿಸಲಾಗಿದ್ದ 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 3800 ಬೀದಿರಿನ ದೀಪಗಳು ಮತ್ತು ಗೋಬೋ ಪ್ರೊಜೆಕ್ಟರ್ ಲೈಟ್ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಆತಂಕದ ವಿಚಾರ ಏನೆಂದರೆ ಅಯೋಧ್ಯೆಯ ಅತ್ಯಂತ ಪ್ರಮುಖ ಮತ್ತು ಸುರಕ್ಷಿತ ಸ್ಥಳದಲ್ಲೇ ಕಳ್ಳತನ ನಡೆದಿದೆ. ಅಲ್ಲಿನ ಸ್ಥಳೀಯರು, ಪೊಲೀಸರು ಸೇರಿದಂತೆ ಯಾರಿಗೂ ಕಳ್ಳರ ಸುಳಿವು ಸಿಕ್ಕಿಲ್ಲ. ಯಶ್ ಎಂಟರ್ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್ ಸಂಸ್ಥೆಗಳು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಒಪ್ಪಂದದಡಿಯಲ್ಲಿ ರಾಂಪತ್ನ ಮರಗಳ ಮೇಲೆ 6400 ಬಿದಿರು ದೀಪಗಳು ಹಾಗೂ 96 ಗೋಬೋ ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಲಾಗಿತ್ತು.
ಈ ಕುರಿತು ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.