February 2, 2026

ಉಡುಪಿ: ಶೋರೂಂ ಮ್ಯಾನೇಜರ್‌ಗೆ ಚೂರಿಯಿಂದ ಇರಿದ ಸೆಕ್ಯೂರಿಟಿ ಗಾರ್ಡ್

0
image_editor_output_image48473925-1723542584600.jpg

ಉಡುಪಿ: ಉಡುಪಿಯ ಶೋರೂಂ ಒಂದರ ಮ್ಯಾನೇಜರ್‌ಗೆ ಅದೇ ಶೋರೂಂನ ಸೆಕ್ಯೂರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ್ದಾನೆ.

ಸೆಕ್ಯೂರಿಟಿ ಗಾರ್ಡ್ ಕಾದು ನಿಂತು ಚೂರಿ ಹಾಕಿ, ಬಳಿಕ ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನಿಸಿದ್ದು, ಈ ಭಯಾನಕ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶೋರೂಂನ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಪ್ರಸಾದ್ ಚೂರಿಯಿಂದ ಇರಿದ ಆರೋಪಿ. ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್ ಗೆ ವಾರ್ನಿಂಗ್ ನೀಡಲಾಗಿತ್ತು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ವಿನಂತಿಸಿದ್ದ ಎನ್ನಲಾಗಿದೆ.

ಮರುದಿನ ಮೀಟಿಂಗ್ ನಲ್ಲಿ ಚರ್ಚಿಸುವುದಾಗಿ ಮ್ಯಾನೇಜರ್ ರೋನ್ಸನ್ ಹೇಳಿದ್ದರು. ಆದರೆ ಮಾತುಕತೆ ಬಳಿಕ ಗೌಂಡ್ ಫ್ಲೋರ್ ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್, ಕ್ಲಸ್ಟರ್ ಮ್ಯಾನೇಜ‌ರ್ ರೋನ್ಸನ್ ಬರುತ್ತಿದ್ದಂತೆ ಕಾದುನಿಂತು ಚೂರಿಯಲ್ಲಿ ಇರಿದಿದ್ದಾನೆ.ಪ್ರಾಣಾಪಾಯ ಅರಿತು ಓಡಿದ ರೋನ್ಸನ್ ರನ್ನು ಆರೋಪಿ ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನ ನಡೆಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!