February 2, 2026

ಕಾಸರಗೋಡು: ಉರುಳಿಗೆ ಸಿಲುಕಿ ಚಿರತೆ ಮೃತ್ಯು

0
IMG-20240809-WA0002.jpg

ಕಾಸರಗೋಡು: ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟ ಘಟನೆ ಆದೂರು ಸಮೀಪದ ಮಲ್ಲಂಪಾರೆಯಲ್ಲಿ ನಡೆದಿದೆ. ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಉರುಳಿಗೆ ಸಿಲುಕಿದ ಸ್ಥಿತಿಯಲ್ಲಿ ಚಿರತೆ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು.

ಬೊಬ್ಬೆ ಕೇಳಿ ಸ್ಥಳೀಯರು ಗಮನಿಸಿದಾಗ ಚಿರತೆ ಸಿಲುಕಿರುವುದು ಕಂಡು ಬಂದಿದೆ. ಮಾಹಿತಿ ತಿಳಿದು ಬಂದಡ್ಕ ವಿಭಾಗೀಯ ಅರಣ್ಯಾಧಿಕಾರಿ ನೇತೃತ್ವದ ತಂಡವು ಸ್ಥಳಕ್ಕಾಗಮಿಸಿತ್ತು. ಚಿರತೆಯ ಸೊಂಟಕ್ಕೆ ಉರುಳು ಬಿದ್ದಿರುವುದರಿಂದ ಸಮೀಪಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಇದರಿಂದ ಪ್ರಜ್ಞೆ ತಪ್ಪಿಸಿ ರಕ್ಷಿಸಲು ವಯನಾಡಿನ ತಂಡದ ನೆರವು ಕೋರಲಾಗಿತ್ತು.

ಆದರೆ ತಂಡವು ಆಗಮಿಸುವ ಮೊದಲೇ ಸಂಜೆ ವೇಳೆಗೆ ಚಿರತೆ ಸಾವಿಗೀಡಾಗಿದೆ. ಹಂದಿಗಾಗಿ ಇಡಲಾಗಿದ್ದ ಉರುಳು ಚಿರತೆ ಸಾವಿಗೆ ಕಾರಣವಾಗಿದ್ದು, ಉರುಳು ಇರಿಸಿದ್ದು ಯಾರೆಂಬ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.

Leave a Reply

Your email address will not be published. Required fields are marked *

error: Content is protected !!