ಸಂಬಂಧಿಕರೇ ಸೇರಿ ಮಾರಾಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ
ಚನ್ನಪಟ್ಟಣ: ಯುವಕನೊಬ್ಬನನ್ನು ಸಂಬಂಧಿಕರೇ ಸೇರಿ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ರಸ್ತೆ ಬದಿ ಬಿಸಾಕಿದ ಘಟನೆಯೊಂದು ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೊಡ್ಡನಹಳ್ಳಿ ಗ್ರಾಮದ ರಂಜಿತ್ ಕುಮಾರ್(29) ಕೊಲೆಯಾದ ಯುವಕ, ತನ್ನ ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ಚಿಕ್ಕಪ್ಪ ನಾಗರಾಜು, ಮಂಗಳಮ್ಮ ಮತ್ತು ಅವರ ಮಗ ಸುನೀಲ್ ಕುಮಾರ್ ಸೋಮವಾರ (ಆಗಸ್ಟ್ 5) ಸಂಜೆ ರಂಜಿತ್ ಜೊತೆ ಗಲಾಟೆ ಮಾಡಿ ಬಳಿಕ ಮಚ್ಚಿನಿಂದ ತಲೆಗೆ ಹೊಡೆದು ಜಮೀನಿನಲ್ಲೇ ಕೊಲೆ ಮಾಡಿದ್ದಾರೆ.
ಬಳಿಕ ಶವವನ್ನು ರಸ್ತೆ ಬದಿಗೆ ಎಳೆದು ತಂದು ಹಾಕಿದ ದುಷ್ಕರ್ಮಿಗಳು ತಡ ರಾತ್ರಿ ಪೊಲೀಸರ ಬಳಿ ಹೋಗಿ ಶರಣಾಗಿ ಕೊಲೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.





