ಬಂಟ್ವಾಳ: ಯಕ್ಷಗಾನ ಹಾಸ್ಯ ಕಲಾವಿದ ನಿಧನ
ಬಂಟ್ವಾಳ: ಯಕ್ಷಗಾನ ಹಾಸ್ಯ ಕಲಾವಿದ, ಪುಂಜಾಲಕಟ್ಟೆ ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ, ಅಂತರಗುತ್ತು ನಿವಾಸಿ ಮುನಿರಾಜ ಚೌಟರವರ ಪುತ್ರ ವಿಶಾಲ್ ಜೈನ್(ವಿ.ಕೆ ಜೈನ್) (47) ಆ.5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಬೆಂಕಿನಾಥೇಶ್ವರ ಮೇಳ, ಸಸಿಹಿತ್ಲು ಮೇಳ, ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಪ್ಪನಾಡು ಮೇಳಗಳಲ್ಲಿಯೂ ತೊಡಗಿಕೊಂಡಿದ್ದ ಇವರು, ರಂಗಭೂಮಿಯಲ್ಲೂ ಬಣ್ಣ ಹಚ್ಚಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.





