ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆಗೈದ ಪತಿ
ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ತವರು ಮನೆಯಲ್ಲಿದ್ದ ಪತ್ನಿಗೆ ಪತಿಯೇ ಚಾಕುವಿನಿಂದ ಹತ್ತಾರು ಭಾರೀ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಆರೋಪಿ ಪತಿ ತನ್ನ ವಿಕೃತಿಯನ್ನು ಫೇಸ್‌ಬುಕ್ ಲೈವ್ ಮಾಡಿ, ಯಾವ ರೀತಿ ಹತ್ಯೆ ಮಾಡಿದ್ದೇನೆ ಎಂದು ಬಹಿರಂಗ ಪಡಿಸಿದ್ದಾನೆ.
ಚಾಮರಾಜಪೇಟೆಯ ಎಂ.ಡಿ.ಬ್ಲಾಕ್ ನಿವಾಸಿ ಸೈಯಿದಾ ಫಾಜೀಲ್ ಫಾತೀಮಾ(34) ಕೊಲೆಯಾದ ಮಹಿಳೆ.
ಕೃತ್ಯ ಎಸಗಿದ ಈಕೆಯ ಪತಿ ತಬ್ರೇಜ್ ಪಾಷಾ(37) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ 2 ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.




