ಮಂಗಳೂರು: ನಡು ರಸ್ತೆಯಲ್ಲೇ ವಿದ್ಯಾರ್ಥಿಗಳ ಹೊಡೆದಾಟ, ವೀಡಿಯೋ ವೈರಲ್
ಮಂಗಳೂರು: ನಡು ರಸ್ತೆಯಲ್ಲೇ ವಿಧ್ಯಾರ್ಥಿಗಳ ಗುಂಪು ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಪ್ರತಿಷ್ಠಿತ ಕಾಲೇಜು ಬಳಿ ನಡೆದಿದೆ.
ಕಾಲೇಜು ಗೇಟ್ ಎದುರಿನ ರಸ್ತೆಯಲ್ಲಿ ಕಾಲೇಜು ವಿಧ್ಯಾರ್ಥಿಗಳು ನಡುವೆ ಗಲಾಟೆ ನಡೆದಿದ್ದು, ಬಳಿಕ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಕಾಲೇಜು ಬಿಟ್ಟ ಬಳಿಕ ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯರ ಮಧ್ಯೆಯೇ ಮಾತಿನ ಚಕಮಕಿ ನಡೆದಿತ್ತು, ಬಳಿಕ ಏಕಾಏಕಿ ಹೊಡೆದಾಡುವ ಹಂತಕ್ಕೆ ತಲುಪಿ ವಿಧ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.




