March 19, 2026

ಮಳೆ ಹಾನಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 167.73 ಕೋಟಿ ರೂ. ನಷ್ಟ: ದಿನೇಶ್ ಗುಂಡೂರಾವ್

0
image_editor_output_image-1750217432-1722662572364.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಕಾರಣದಿಂದ ಇಲ್ಲಿಯ ವರೆಗೆ ಒಟ್ಟು 167.73 ಕೋ.ರೂ. ನಷ್ಟವಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಬಳಕೆಗಾಗಿ ಜಿಲ್ಲಾ ವಿಪತ್ತು ಪರಿಹಾರ ನಿಧಿಯಲ್ಲಿ 14.22 ಕೋ.ರೂ. ಹಾಗೂ ತಾಲೂಕುಗಳಲ್ಲಿ ಒಟ್ಟು 4.14 ಕೋ.ರೂ. ಲಭ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಹಾಗೂ ನೆರೆಹಾನಿಯಿಂದ ತತ್ತರಿಸಿದ ವಿವಿಧ ಪ್ರದೇಶ ಗಳಿಗೆ ಶುಕ್ರವಾರ ಭೇಟಿ ನೀಡಿ ಬಳಿಕ ಪತ್ರಿಕಾ ಗೋಷ್ಠಿwgggrgಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. 154 ಮನೆಗಳು ಸಂಪೂರ್ಣ ಹಾಗೂ 484 ಭಾಗಶಃ ಹಾನಿಗೀಡಾಗಿವೆ. 18 ಪ್ರಾಣಿಗಳು ಮೃತಪಟ್ಟಿವೆ.

Leave a Reply

Your email address will not be published. Required fields are marked *

error: Content is protected !!