ವಿಟ್ಲ: ಕುದ್ದುಪದವು-ಪಕಳಕುಂಜ ರಸ್ತೆಯಲ್ಲಿ ಗುಡ್ಡ ಕುಸಿತ
ವಿಟ್ಲ- ಕುದ್ದುಪದವು ಪಕಳಕುಂಜ ರಸ್ತೆಯ ಕೆದುವಾರ್ ತಿರುವಿನಲ್ಲಿ ಗುಡ್ಡೆ ಜರಿದು ರಸ್ತೆಗೆ ಬಿದ್ದಿದೆ. ಘಟನೆಯಿಂದ ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಕೆದುವಾರು ಬಳಿಯಲ್ಲಿ ಗುಡ್ಡ ಕುಸಿದಿದ್ದು, ಮಳೆಯ ತೀವ್ರತೆ ಹೆಚ್ಚಾದಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಜರಿಯುವ ಸಾಧ್ಯತೆ ಕಂಡುಬಂದಿದೆ.
ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಕಂಡುಬಂದಿದೆ. ಹೀಗಾಗಿ ವಾಹನ ಸವಾರರು ಗಮನದಲ್ಲಿರಿಸಿಕೊಂಡು ಸಂಚರಿಸುಂತೆ ಸೂಚಿಸಲಾಗಿದೆ.




