ವಿಟ್ಲ: ಮದ್ಯದ ನಶೆಯಲ್ಲಿ ಸರಣಿ ಅಪಘಾತ ನಡೆಸಿದ ಕೇಪು ಗಣೇಶ: ಪೊಲೀಸ್ ವಶಕ್ಕೆ
ವಿಟ್ಲ: ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಸರಣಿಯಾಗಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಕೇಪು ಗ್ರಾಮದ ಗಣೇಶ್ ಎಂಬಾತನು ಇಂದು ಸಂಜೆ ನಾಲ್ಕು ಮಾರ್ಗದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದಾಗ ಕಾರುಗಳಿಗೆ ಹಾಗೂ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದಾಗ ಮೇಗಿನಪೇಟೆಯ ಬಳಿ ಪೊಲೀಸರು ಅಡ್ಡಗಟ್ಟಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.




