ಬಿ.ಸಿ.ರೋಡಿನಲ್ಲಿ ಕಳವಾದ ಬೈಕ್ ರಾಮನಗರದಲ್ಲಿ ಪತ್ತೆ
ಬಂಟ್ವಾಳ: ಬಿಸಿರೋಡಿನಲ್ಲಿ ಕಳವಾದ ಬೈಕನ್ನು ಪೊಲೀಸರು ರಾಮನಗರದಲ್ಲಿ ಪತ್ತೆಹಚ್ಚಿ ಬೈಕ್ ಕಳ್ಳನ ಹೆಡೆಮುರಿ ಕಟ್ಟಿದ್ದಾರೆ. ರಾಮನಗರದ ಬಿಡದಿ ತಾಲೂಕಿನ ಬಾಣಂದೂರು ನಿವಾಸಿ ರಾಜು ಕೆ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ತಿಂಗಳು ಜೂ.26 ರಂದು ಪವನ್ ಎಂಬಾತ ಬಿಸಿರೋಡಿನ ಹೋಟೆಲ್‌ವೊಂದಕ್ಕೆ ನೀಡಿದ್ದು, ಬೈಕ್ ಕೀಯನ್ನು ಗಾಡಿಯಲ್ಲೇ ಇಟ್ಟು ಹೋಟೆಲ್ ಒಳಗಡೆ ತೆರಳಿದ್ದಾರೆ.
ಇದೇ ವೇಳೆ ಹೋಟೆಲ್ ನಿಂದ ಹೊರಬರುತ್ತಿದ್ದ ಆರೋಪಿ ರಾಜು ಎಂಬಾತ ಇದನ್ನು ಗಮನಿಸಿದ್ದಾನೆ. ಬೈಕ್‌ನಲ್ಲಿದ್ದ ಕೀಯಿಂದ ಗಾಡಿ ಸ್ಟಾಟ್ ಮಾಡಿಕೊಂಡು ನೇರವಾಗಿ ತನ್ನ ಊರು ರಾಮನಗರಕ್ಕೆ ತೆರಳಿದ್ದಾನೆ.




