February 2, 2026

ಉಪ್ಪಿನಂಗಡಿ: ಮನೆಯ ಮೇಲೆ ಗುಡ್ಡ ಕುಸಿತ, ಮನೆಮಂದಿ ಅಪಾಯದಿಂದ ಪಾರು, ವಾಹನಗಳು ಜಖಂ

0
image_editor_output_image1527685278-1722577153687.jpg

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಆನೆಬೈಲು ಬಳಿಯ ಉಡ್ಡದಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ವಾಹನಗಳು ಮಣ್ಣಿನಡಿ ಸಿಲುಕಿ ಜಖಂಗೊಂಡಿವೆ.

ಇಲ್ಲಿನ ವಿಶ್ವನಾಥ ನಾಯ್ಕ ಎಂಬವರ ಮನೆಯ ಹಿಂದಿನ ಗುಡ್ಡ ಇಂದು ನಸುಕಿನ ಜಾವ 4:15ರ ಸುಮಾರಿಗೆ ಕುಸಿದು ಮನೆಯ ಒಂದು ಪಾರ್ಶ್ವಕ್ಕೆ ಬಿದ್ದಿದೆ. ಇದರಿಂದ ಮನೆಗೆ ಸೇರಿಸಿ ಕಟ್ಟಲಾಗಿದ್ದ ಕೋಣೆ, ಸಿಮೆಂಟ್ ಶೀಟ್ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ನಿಲ್ಲಿಸಲಾಗಿದ್ದ ಕಾರು, ದ್ವಿಚಕ್ರ ವಾಹನ ಮಣ್ಣಿನಡಿ ಸಿಲುಕಿ ಜಖಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!