ಬೆಂಗಳೂರು: ಎಂ.ಎಂ.ವೈ.ಸಿ.ಕಾರ್ಯದರ್ಶಿಯಾಗಿ ಆಯ್ಕೆ
ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ ಬೆಂಗಳೂರು ಇದರ ಗೌರವಾಧ್ಯಕ್ಷ ಉಮರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಂಟ್ವಾಳ ತಾಲೂಕು ಇರಾ ಗ್ರಾಮದ ನಿವಾಸಿ ಆರಿಫ್ ಕುಕ್ಕಾಜೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಂ.ವೈ.ಸಿ ಯ ಸಂಸ್ಥಾಪಕಾಧ್ಯಕ್ಷ ಹೆಚ್.ಅಬೂಬಕರ್, ಗೌರವ ಸಲಹೆಗಾರ ರಝಾಕ್ ಎನ್, ಮುಖ್ಯ ಸಂಚಾಲಕ ಜುನೈದ್ ಪಿ.ಕೆ., ಪ್ರ.ಕಾರ್ಯದರ್ಶಿ ಶಹನ್ಫರ್,ಖಜಾಂಜಿ ಖಲಂದರ್, ಉಪಾಧ್ಯಕ್ಷರಾದ ಬಶೀರ್, ವಾಹಿದ್, ರಹಿಮಾನ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.





