December 18, 2025

ಕಡಬ: ಕೆಎಸ್ ಆ ರ್ ಸಿ ಬಸ್ ಗಳ ನಡುವೆ ಅಪಘಾತ: ಕೆಲ ಪ್ರಯಾಣಿಕರಿಗೆ ಗಾಯ

0
image_editor_output_image278499517-1722509095178

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಬಳಿ ಬಸ್ಸುಗಳೆರಡು ಮುಖಾಮುಖಿ ಡಿಕ್ಕಿಯಾದ ಘಟನೆ ಆ.1ರ ಮಧ್ಯಾಹ್ನ ಸಂಭವಿಸಿದೆ.

ಬಿಳಿನೆಲೆ ಸಿ.ಪಿ.ಸಿ.ಆರ್.ಐ ಬಳಿ ಈ ಅಪಘಾತ ನಡೆದಿದ್ದು ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಾಯವಾಗಿದ್ದು ಎರಡೂ ಬಸ್ಸುಗಳ ಮುಂಭಾಗ ಭಾಗಶ: ಹಾನಿಯಾಗಿದೆ

ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ತೀವ್ರ ಮಳೆಯ ನಡುವೆ ಅತೀ ವೇಗದಿಂದ ಸಂಚರಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮಾಹಿತಿ ತಿಳಿದು ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!