ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವು: ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಸರ್ಜಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ ಸ್ಕೂಟಿ ಕದ್ದ ಮೂವರು ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರ್ಜಾಪುರದ ಸಂಪುರ ಗೇಟ್ ಬಳಿ ಮನೆ ಮಂದೆ ನಿಲ್ಲಿಸಿದ ಸ್ಕೂಟಿಯನ್ನ ಮೂವರು ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ. ಬಳಿಕ ಆರಾಮಾಗಿ ಸ್ಕೂಟರ್ ಅನ್ನು ಸಂಪುರ ಗೇಟ್‌ನಿಂದ ದೊಮ್ಮಸಂದ್ರದ ಕಡೆಗೆ ತಳ್ಳಿಕೊಂಡೆ ಹೋಗಿರುವ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.





