ಪುತ್ತೂರು: ಹಾಡಹಗಲೇ ಮಹಿಳೆಯ ಅಪಹರಣ: ಇಬ್ಬರ ಬಂಧನ
ಪುತ್ತೂರು: ಹಾಡಹಗಲೇ ಮಹಿಳೆಯೋರ್ವರನ್ನು ಅಪಹರಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.
ಕದಂಬಾಡಿ ಗ್ರಾಮದ ತಿಂಗಳಾಡಿ ಕೊಡಂಗೋಣಿಯ ಚಂದ್ರಶೇಖರ ಕೊಡಂಗೋಣಿ ಮತ್ತು ಜಗದೀಶ ಕೊಡಂಗೋಣಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ತಿಂಗಳಾಡಿ ನಿವಾಸಿ ಮಹಿಳೆಯೋರ್ವರನ್ನು ಆರೋಪಿಗಳ ಪೈಕಿ ಓರ್ವ ಪ್ರೀತಿ ಮಾಡುತ್ತಿದ್ದ, ಅದೇ ಮಹಿಳೆಗೆ ಬೇರೊಬ್ಬರ ಜೊತೆ ಪ್ರೇಮ ಇದ್ದ ಕಾರಣ ಈತನ ಪ್ರೀತಿಯನ್ನು ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆರೋಪಿ ನಡುವೆ ವಾಗ್ವಾದ ಮತ್ತು ಮೊಬೈಲ್ ಚಕಮಕಿ ನಡೆದಿತ್ತು.
ಆ ಬಳಿಕ ಆರೋಪಿಗಳಿಬ್ಬರು ಮಾತುಕತೆ ನಡೆಸಲು ತಿಂಗಳಾಡಿಗೆ ಬರಲು ಹೇಳಿ ಬಳಿಕ ಮಹಿಳೆಯನ್ನು ಇಬ್ಬರು ಸೇರಿ ಅಪಹರಣ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಈ ಕುರಿತು ಮಾಹಿತಿ ಬಂದ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಅಪಹರಣ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಸುಳ್ಯ ತಾಲೂಕು ಕೋಡಿಯಾಲ ನಿವಾಸಿ ಶರತ್ ಕುಮಾರ್ ದೂರು ನೀಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





