ಮಡಿಕೇರಿ : ಮೇಯಲು ಬಿಟ್ಟಿದ್ದ 6 ಹಸುಗಳು ಕೊಟ್ಟಿಗೆಗೆ ಬರುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ.
ಬೊಜ್ಜಂಗಡ ನಟರಾಜ್ ಎಂಬವರ ಹಸುಗಳು ಸಾವನ್ನಪ್ಪಿದ್ದು, ಹೈನುಗಾರಿಕೆಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಕುಟುಂಬ ಕಂಗಾಲಾಗಿದೆ.