ವಿಟ್ಲ: ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ವತಿಯಿಂದ ಸರಕಾರಿ ಪ್ರೌಢ ಶಾಲೆಗೆ( RMSA) ಸ್ಮಾರ್ಟ್ ಟಿವಿ ಕೊಡುಗೆ- ಉದ್ಘಾಟನೆ
ವಿಟ್ಲ: ಸರಕಾರಿ ಪ್ರೌಢಶಾಲೆ (RMSA)ವಿಟ್ಲ ಪ್ರಾಥಮಿಕ ವಿಭಾಗ ಇಲ್ಲಿ CodeCraft Technologies ಸಂಸ್ಥೆಯ ವತಿಯಿಂದ ನೀಡಲಾದ ಸ್ಮಾರ್ಟ್ ಟಿ.ವಿ ಉದ್ಘಾಟನಾ ಸಮಾರಂಭ ನೆರವೇರಿತು.
Code Craft Technologies ಸಂಸ್ಥೆಯ ತಾಂತ್ರಿಕ ಅಧಿಕಾರಿ ಶ್ರೀಯುತ ಪ್ರವೀಣ್ ಕ್ಯಾಸ್ಟಲಿನೊ ಸ್ಮಾರ್ಟ್ ಟಿ.ವಿ ಉದ್ಘಾಟಿಸಿ, ಮಾದರಿ ಪಾಠವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ CodeCraft Technologies ಸಂಸ್ಥೆಯ ಹಿರಿಯ ಅಧಿಕಾರಿ ಶ್ರೀಯುತ ಜೋಬಿನ್ ಜೋಸೆಫ್ ಉಪಸ್ಥಿತರಿದ್ದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಯುತ ಪ್ರವೀಣ್ ಕ್ಯಾಸ್ಟಲಿನೊ ಶೈಕ್ಷಣಿಕ ರಂಗಕ್ಕೆ ತಾಂತ್ರಿಕ ಸಹಕಾರ ನೀಡುವಲ್ಲಿ CodeCraft Technologies ನ ಪಾತ್ರವನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿಶಂಕರ ಶಾಸ್ತ್ರಿಯವರು ಕಲಿಕೆಗೆ ತಾಂತ್ರಿಕ ಸಹಕಾರವನ್ನಿತ್ತ ಸಂಸ್ಥೆಯನ್ನು ಅಭಿನಂದಿಸಿದರು.


ಇದೇ ಸಂದರ್ಭದಲ್ಲಿ ಸ್ಮಾರ್ಟ್ ಟಿ.ವಿಯನ್ನು ಕೊಡುಗೆಯಾಗಿ ನೀಡಲು ಸಹಕರಿಸಿದ ಶ್ರೀಯುತ ಜತ್ತಪ್ಪ ಗೌಡ, ಪ್ರವೀಣ್ ಕ್ಯಾಸ್ಟಲಿನೊ, ಜಾಬಿನ್ ಜೋಸೆಫ್ ಮತ್ತು ವೇದಾಂತ್ ರವರಿಗೆ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀಮತಿ.ಕೆ. ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ‘ಚಿತ್ರ-ಚಿತ್ತಾರ’ 2023-24ರ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರೌಢವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ರಶ್ಮಿ, ವಿಟ್ಲ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀಯುತ ರವಿಪ್ರಕಾಶ್ ವಿಟ್ಲ, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀಯುತ ಸದಾಶಿವ ನಾಯಕ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರಾದ ಚಿಂತನಾ, ಹಂಸಿನಿ, ಪ್ರತೀಕ್ಷಾ ಮತ್ತು ಶ್ರದ್ಧಾರುಕ್ಮಿಣಿ ಕಾರ್ಯಕ್ರಮ ನಿರ್ವಹಿಸಿದರು.





